ಚಿಕ್ಕಮಗಳೂರು: ಹಿರಿಯ ಸಂಗೀತ ವಿದ್ವಾನ್ ಟಿ.ಆರ್.ನಾರಾಯಣಸ್ವಾಮಿ ಅವರ ನಿಧನಕ್ಕೆ ಸಾಂಸ್ಕೃತಿಕ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕರ್ನಾಟಕ ಸಂಗೀತ ಕ್ಷೇತ್ರದ ಅದ್ಭುತ ಪ್ರತಿಭೆ ಪಿಟೀಲು ಟಿ.ಚೌಡಯ್ಯನವರ ನೇರ ಶಿಷ್ಯರಾಗಿದ್ದು, ಸಾಂಸ್ಕೃತಿಕ ಸಂಘದ ಸ್ಥಾಪಕ ಸದಸ್ಯರಾಗಿದ್ದ ರಾಜ್ಯಾದ್ಯಂತ ಸಹಸ್ರಾರು ಶಿಷ್ಯ ವೃಂದವನ್ನು ಹೊಂದಿದ್ದ ನಾರಾಯಣಸ್ವಾಮಿ ಅವರ ನಿಧನದಿಂದಾಗಿ ದಕ್ಷಿಣಾದಿ ಶೈಲಿಯ ಶುದ್ಧ ಪಾರಂಪರಿಕ ಸಂಗೀತದ ಕೊಂಡಿ ಕಳಚಿದಂತಾಗಿದೆ ಎಂದು ಸಂಘದ ಕಾರ್ಯದರ್ಶಿ ಉಜ್ವಲ್ ಡಿ. ಪಡುಬಿದ್ರಿ ಶೋಕಿಸಿದ್ದಾರೆ.










