ಚಿಕ್ಕಮಗಳೂರು: ಆಕಸ್ಮಿಕವಾಗಿ ಪಟಾಕಿ ಕಿಡಿ ತಗಲಿ ಆಟಂ ಬಾಂಬ್ ಏಕಾಏಕಿ ಸಿಡಿದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದ ಹಳ್ಳಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಪ್ರದೀಪ್ (30) ಎಂದು ಗುರುತಿಸಲಾಗಿದೆ. ಪ್ರದೀಪ್, ಮಕ್ಕಳ ಕೈಗೆ ಆಟಂ ಬಾಂಬ್ ಪಟಾಕಿ ಬಾಕ್ಸ್ ಸಿಗಬಾರದು ಎಂದು ಕುರ್ಚಿಯ ಕೆಳಗೆ ಇಟ್ಟು ಅದೇ ಕುರ್ಚಿಯ ಮೇಲೆ ಕೂತಿದ್ದ. ಮಕ್ಕಳು ಹಾಗೂ ಸ್ನೇಹಿತರ ಜೊತೆ ಆಟವಾಡ್ತಾ ಸಣ್ಣ ಪುಟ್ಟ ಪಟಾಕಿ ಹೊಡೆಯುತ್ತಿದ್ದ, ಇದೇ ವೇಳೆ ಆ ಪಟಾಕಿಯ ಕಿಡಿ ಬಾಕ್ಸ್ ಮೇಲೆ ಬಿದ್ದು ಆಟಂ ಬಾಂಬ್ ಏಕಾಏಕಿ ಸಿಡಿದಿದೆ. ಪಟಾಕಿಗಳು ಸಿಡಿದ ಪರಿಣಾಮ 5 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾನೆ. ಈ ವೇಳೆ ದೇಹದ ಸೂಕ್ಷ್ಮ ಭಾಗಗಳಿಗೆ ತೀವ್ರ ಪೆಟ್ಟಾಗಿದೆ. ಇದರಿಂದ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೇ ಮೂವರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ತರೀಕೆರೆ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.










