ತಾತನ ಅಂತ್ಯಕ್ರಿಯೆಗೆ ತೆರಳುತ್ತಿದ್ದ ಮೊಮ್ಮಗ ಬೈಕ್ ಅಪಘಾತದಲ್ಲಿ ದುರ್ಮರಣ…

77
firstsuddi

ಚಾಮರಾಜನಗರ: ತಾತನ ಸಾವಿನ ಸುದ್ದಿ ಕೇಳಿ ಅಂತ್ಯಕ್ರಿಯೆಗೆ ತೆರಳುತ್ತಿದ್ದ ಮೊಮ್ಮಗ ಬೈಕ್ ಅಪಘಾತದಲ್ಲಿ ದುರ್ಮಣರಕ್ಕೀಡಾದ ಘಟನೆ ತಾಲೂಕಿನ ಪಣ್ಯದಹುಂಡಿ ಬಳಿ ನಡೆದಿದೆ.

ನಿತೀಶ್ ಪೂಜಾರಿ (23) ಮೃತ ವಿದ್ಯಾರ್ಥಿ. ಮೂಲತಃ ಉಡುಪಿ ಜಿಲ್ಲೆಯ ಹೆಬ್ರಿ ನಿವಾಸಿಯಾದ ನಿತೀಶ್ ಪೂಜಾರಿ, ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ. ಊರಿನಲ್ಲಿ ತಾತ ಮೃತಪಟ್ಟಿರುವ ಸುದ್ದಿ ಕೇಳಿ ತಕ್ಷಣವೇ ಬೈಕ್ ಏರಿ ಮೈಸೂರಿನತ್ತ ಹೊರಟಿದ್ದ ಮೊಮ್ಮಗ, ಪಣ್ಯದ ಹುಂಡಿ ಬಳಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ರೋಡ್ ಹಂಪ್ಸ್‌ನಲ್ಲಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿರಬಹುದು ಎನ್ನಲಾಗಿದ್ದು, ಈ ಬಗ್ಗೆ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.