ಸಿಡಿಲು ಬಡಿದು ಕಾರ್ಮಿಕ ಸಾವು…

110
firstsuddi

ಕುಂದಾಪುರ: ಸಿಡಿಲು ಬಡಿದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ನಾಡು ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಮೃತಪಟ್ಟ ಕಾರ್ಮಿಕ ಉತ್ತರ ಪ್ರದೇಶ ಮೂಲದ ದೀಪ್ ಚಂದ್ (50) ಎಂದು ಗುರುತಿಸಲಾಗಿದೆ. ಹಳ್ನಾಡು ಗ್ರಾಮದ ಮರಳು ಧಕ್ಕೆಯಲ್ಲಿ ಶನಿವಾರ ಸಂಜೆ ವೇಳೆ ವಾಹನಕ್ಕೆ ಮರಳು ತುಂಬಿಸುತ್ತಿದ್ದಾಗ ಆಕಸ್ಮಿಕವಾಗಿ ಬಂದ ಸಿಡಿಲು ಬಡಿದು ಅವರು ಮೃತಪಟ್ಟಿದ್ದಾರೆ.

ಘಟನೆ ಬಗ್ಗೆ ಕಂಡ್ಲೂರಿನ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ತೆರಳಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.