ಮೊಬೈಲ್ ಬಳಸುವ ವಿಚಾರಕ್ಕೆ ಗಲಾಟೆ- ಮಗನಿಗೆ ಚೂರಿ ಇರಿದು ಕೊಂದ ತಂದೆ…

47
firstsuddi

ಮೈಸೂರು: ಮೊಬೈಲ್ ಬಳಸುವ ವಿಚಾರಕ್ಕೆ ಅಪ್ಪ-ಮಗನ ನಡುವೆ ಜಗಳ ನಡೆದು ಮಗನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಬನ್ನಿಮಂಟಪದಲ್ಲಿ ನಡೆದಿದೆ.

ಉಮೇಜ್(23) ಕೊಲೆಯಾದ ದುರ್ದೈವಿ. ಅಸ್ಲಂಪಾಷ ಕೊಲೆ ಮಾಡಿದ ತಂದೆ. ತಾಯಿಯ ಮೊಬೈಲ್ ಅನ್ನು ಅನುಮತಿಯಿಲ್ಲದೆ ಬಳಸಿದ್ದಕ್ಕೆ ಮಗನೊಂದಿಗೆ ತಂದೆ ಅಸ್ಲಂಪಾಷ ಜಗಳ ತೆಗೆದಿದ್ದ. ತಂದೆ-ಮಗನ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಹೊಡೆದಾಟ ಮಾಡಿಕೊಂಡಿದ್ದಾರೆ. ಈ ವೇಳೆ ತಂದೆ ಅಸ್ಲಂಪಾಷ ಕೋಪದಿಂದ ಮಗ ಉಮೇಜ್‌ಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಮಗನನ್ನ ಕೊಂದ ತಂದೆ ಅಸ್ಲಂಪಾಷನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.