ಯಾವುದೇ ಸ್ಪರ್ಧೆಗಳಲ್ಲಿ ಸೋಲು ಅಥವಾ ಗೆಲುವು ಮುಖ್ಯವಲ್ಲ, ಸ್ಪರ್ಧೆಗಳಲ್ಲಿ ಭಾಗವಹಿಸಿ ಗುರಿ ತಲುಪಲು ಪ್ರಯತ್ನಿಸುವುದೇ ಮುಖ್ಯ: ಡಾ.ಜಿ ಗಣೇಶ್.

74
firstsuddi

ಚಿಕ್ಕಮಗಳೂರು: ಖ್ಯಾತ ಆಹಾರತಜ್ಞ ಡಾ.ಕೆ.ಸಿ. ರಘು ಅವರ ಸ್ಮರಣಾರ್ಥ ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಜೆವಿಎಸ್ ಶಾಲೆಯ ವಿದ್ಯಾರ್ಥಿ ದೀಪ್ತಿ ಮನ್ನಾ ಪ್ರಥಮ, ಕುವೆಂಪು ವಿದ್ಯಾನಿಕೇತನದ ಗಂಗಾ ಅರಸ್ ದ್ವಿತೀಯ ಹಾಗೂ ಸೈಂಟ್ ಮೇರೀಸ್ ಶಾಲೆಯ ಪುಷ್ಪ ತೃತೀಯ ಸ್ಥಾನ ಗಳಿಸಿದರು.

ಚರ್ಚಾ ಸ್ಪರ್ಧೆಯಲ್ಲಿ ಯುನೈಟೆಡ್ ಶಾಲೆಯ ಜೈನಬ್ ಜೋಹಾರ, ಜೆವಿಎಸ್ ಶಾಲೆಯ ಮೈತ್ರಿ ಕೆ ನಿತ್ಯಾನಂದ ಪ್ರಥಮ, ಕುವೆಂಪು ಶಾಲೆಯ ಗಂಗಾ ಅರಸ್, ಸೇಂಟ್ ಮೇರಿಸ್ ಶಾಲೆಯ ಅರ್ವ ಇಸ್ಮಾಯಿಲ್ ದ್ವಿತೀಯ ಸ್ಥಾನ ಪಡೆದರು.

ಪ್ರಬಂಧ ಸ್ಪರ್ಧೆಯಲ್ಲಿ ಕುವೆಂಪು ವಿದ್ಯಾನಿಕೇತನದ ಗಾನವಿ ಎನ್ ದೇವರಾಜ್ ಪ್ರಥಮ, ಸಂಜೀವಿನಿ ವಿದ್ಯಾಸಂಸ್ಥೆಯ ಎಚ್.ಟಿಪಲ್ಲವಿ ದ್ವಿತೀಯ, ಸೈಂಟ್ ಮೇರೀಸ್ ಶಾಲೆಯ ಜೈಮದಾಹಿಯ ತೃತೀಯ ಸ್ಥಾನ ಗಳಿಸಿದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಕುವೆಂಪು ವಿದ್ಯಾನಿಕೇತನದ ಶರವೈ ಮತ್ತು ಹಿಮವಂತ್ ಪ್ರಥಮ ಹಾಗೂ ಸೈಂಟ್ ಮೇರೀಸ್ ಶಾಲೆಯ ನಿಕ್ಷೇಪ ಮತ್ತು ಸುಮುಖ್ ದ್ವಿತೀಯ ಸ್ಥಾನ ಪಡೆದರು ಕುವೆಂಪು ವಿದ್ಯಾನಿಕೇತನ ಶಾಲೆ ಸಮಗ್ರ ಪ್ರಶಸ್ತಿಗೆ ಪಾತ್ರವಾಯಿತು.

ಸ್ಪರ್ಧೆಯ ನಂತರ ನಡೆದ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಎಮ್‍ಎಲ್ಎಂಎನ್ ಬಿಎಡ್ ಶಾಲೆಯ ಪ್ರಾಂಶುಪಾಲ ಡಾ.ಜಿ ಗಣೇಶ್ ಯಾವುದೇ ಸ್ಪರ್ಧೆಗಳಲ್ಲಿ ಸೋಲು ಅಥವಾ ಗೆಲುವು ಮುಖ್ಯವಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಗುರಿ ತಲುಪಲು ಪ್ರಯತ್ನಿಸುವುದೇ ಮುಖ್ಯ ಹಾಗಾಗಿ ವಿದ್ಯಾರ್ಥಿಗಳು ಸೋಲು ಅಥವಾ ಗೆಲುವಿಗೆ ತಲೆಕೆಡಿಸಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುವೆಂಪು ವಿದ್ಯಾನಿಕೇತನದ ಕಾರ್ಯದರ್ಶಿ ಕೆ. ಸಿ. ಶಂಕರ್ ಸ್ಪರ್ಧೆಗಳ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಗೂ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಕುವೆಂಪು ವಿದ್ಯಾನಿಕೇತನದ ಪ್ರಾಂಶುಪಾಲ ರಾಘವೇಂದ್ರ, ಉಪ ಪ್ರಾಂಶುಪಾಲೆ ಶೆಮ್ಮಿ, ಶಿಕ್ಷಕರಾದ ಬಿಂದು, ಶಾಂತಿ ಉಪಸ್ಥಿತರಿದ್ದರು.