ಚಿಕ್ಕಮಗಳೂರು: ಯಕ್ಷಗಾನ ಅಭಿಮಾನಿ ಬಳಗ, ಸಾಂಸ್ಕೃತಿಕ ಸಂಘ ಮತ್ತು ಹವ್ಯಕ ಬಳಗದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಡಿ.10ರಂದು ಸಂಜೆ 5 ಗಂಟೆಗೆ ಶ್ರೀ ಹನುಮಗಿರಿ ಮೇಳದಿಂದ ಶ್ರೀದೇವಿ ಮಹಾತ್ಮೆ ಕಾಲಮಿತಿ ಯಕ್ಷಗಾನ ನಡೆಯಲಿದೆ.
ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ್ ಭಟ್ಕಲ್ಲಡ್ಕ, ಚಂಡೆ, ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಕೌಶಲ್ರಾವ್ ಪುತ್ತಿಗೆ ಭಾಗವಹಿಸಲಿದ್ದಾರೆ.
ಚಕ್ರತಾಳದಲ್ಲಿ ನಿಶ್ವಿತ್ ಜೋಗಿಜೋಡುಕಲ್ಲು, ವಿದೂಷಕರಾಗಿ ಬಂಟ್ವಾಳ ಜಯರಾಮ ಆಚಾರ್ಯ, ಸೀತಾರಾಮ ಕುಮಾರ್ಕಟೀಲು, ಸ್ತ್ರೀ ಪಾತ್ರದಲ್ಲಿ ಸಂತೋಷ್ಕುಮಾರ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಮಹೇಶ್ ಎಡನೀರು ಪಾಲ್ಗೊಳ್ಳಲಿದ್ದಾರೆ.
ಸಭಾಕಾರ್ಯಕ್ರಮವಿಲ್ಲದಿರುವ ಹಿನ್ನೆಲೆಯಲ್ಲಿ ಯಕ್ಷಗಾನ ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು, ಉಚಿತ ಪ್ರವೇಶವಿದೆ ಎಂದು ಯಕ್ಷಗಾನ ಅಭಿಮಾನಿ ಬಳಗದ ಸಂಚಾಲಕ ಕೆ.ಎನ್. ಮಂಜುನಾಥ ಭಟ್ ತಿಳಿಸಿದ್ದಾರೆ.










