ರಜೆ ನೀಡದ್ದಕ್ಕೆ ಮನನೊಂದು ಕಾರ್ಮಿಕ ಆತ್ಮಹತ್ಯೆ.

50
firstsuddi

ಬೆಂಗಳೂರು: ಫ್ಯಾಕ್ಟರಿಯಲ್ಲಿ ರಜೆ ನೀಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗೋವಿಂದರಾಜ್ (24) ಆತ್ಮಹತ್ಯೆಗೆ ಶರಣಾದ ಕಾರ್ಮಿಕ. ಈತ ಪೀಣ್ಯದಲ್ಲಿರುವ ಗಡಿಯಾರ ತಯಾರಿಕೆ ಕಂಪನಿಯೊಂದರಲ್ಲಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇದರ ಜತೆಗೆ ಆರ್‌ಪಿಎಂ ಅಪಾರ್ಟ್‌ಮೆಂಟ್ ನಿರ್ವಹಣೆ ಕೆಲಸ ಮಾಡುತ್ತಿದ್ದ. ಹೀಗಾಗಿ ರಾತ್ರಿ ವೇಳೆ ಅದೇ ಅಪಾರ್ಟ್‌ಮೆಂಟ್‌ ನಲ್ಲಿ ಮಲಗುತ್ತಿದ್ದ. ಗುರುವಾರ ಫ್ಯಾಕ್ಟರಿ ಕೆಲಸಕ್ಕೆ ಹೋಗದೆ ಅಪಾರ್ಟ್‌ಮೆಂಟ್‌ ನಲ್ಲೇ ಇದ್ದ. ಸಂಜೆ 5.30ರ ಸುಮಾರಿಗೆ ಸೀರೆಯಿಂದ ಸ್ಟೇರ್‌ಕೇಸ್‌ನ ಕಂಬಿಗೆ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೂ ಮುನ್ನ ಗೋವಿಂದರಾಜ್ ಡೆತ್ ನೋಟ್ ಬರೆದಿಟ್ಟಿದ್ದು, ಫ್ಯಾಕ್ಟರಿಯ ಮ್ಯಾನೇಜರ್ ಮತ್ತು ಸೂಪರ್‌ವೈಸ‌ರ್ ರಜೆ ನೀಡದೆ ಕಿರುಕುಳ ನೀಡುತ್ತಿದ್ದಾರೆ. ರಜೆ ಕೇಳಿದರೆ ಕೆಲಸದಿಂದಲೇ ತೆಗೆದು ಹಾಕುವುದಾಗಿ ಬೆದರಿಸುತ್ತಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣಪತ್ರದಲ್ಲಿ ಉಲ್ಲೇಖಿಸಿದ್ದಾನೆ.

ಈ ಸಂಬಂಧ ಬಾಗಲಗುಂಟೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.