ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ ಪಡೆದ ಸಿ.ಟಿ.ರವಿ- ಬಿಜೆಪಿ ಮುಖಂಡರಿಂದ ಸನ್ಮಾನ…

77
firstsuddi

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ ಪಡೆದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಅವರನ್ನು ಬಿಜೆಪಿ ಮುಖಂಡರು ನಗರದಲ್ಲಿ ಇಂದು ಅಭಿನಂದಿಸಿದರು.

ಸಿ.ಟಿ.ರವಿ ಅವರ ನಿವಾಸಕ್ಕೆ ತೆರಳಿದ ಮುಖಂಡರು ಅವರನ್ನು ಸನ್ಮಾನಿಸಿ ಗೌರವಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜೆಸಂತಾ ಅನಿಲ್‍ಕುಮಾರ್, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್‍ಕುಮಾರ್, ಉಪಾಧ್ಯಕ್ಷ ವಿನಯ್, ಗಾಯಕ ಮಲ್ಲಿಗೆ ಸುಧೀರ್ ಹಾಜರಿದ್ದರು.