ಬೆಂಗಳೂರು: ಇದೇ ಮೊದಲ ಬಾರಿ ತೃತೀಯಲಿಂಗಿ ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದಿದ್ದಾರೆ.
ಅಯ್ಯಪ್ಪಸ್ವಾಮಿ ದರ್ಶನ ಪಡೆದ ಮೊದಲ ತೃತೀಯಲಿಂಗಿ ಮಹಿಳೆ ಎನ್ನುವ ಕೀರ್ತಿಗೆ ರಿಯಾನಾ ರಾಜು ಪಾತ್ರರಾಗಿದ್ದಾರೆ. ರಿಯಾನಾ ಹಲವು ವರ್ಷಗಳ ಹಿಂದೆ ಪುರುಷನಿಂದ ಹೆಣ್ಣಾಗಿ ಬದಲಾಗಿದ್ದಾರೆ.
ರಿಯಾನಾ ಕೇರಳ ಸರ್ಕಾರದ ದೇವಸ್ವಂ ಬೋರ್ಡ್ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸುತ್ತಲೇ ಇದ್ದರು. ಶಬರಿ ಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಪುರುಷರು ಮತ್ತು ಅಪ್ರಾಪ್ತರು ಹಾಗೂ ವಯಸ್ಕ ಮಹಿಳೆಯರು ಮಾತ್ರ ಪ್ರವೇಶಿಸಲು ಅನುಮತಿಯಿತ್ತು. ಸತತ ಪ್ರಯತ್ನದ ನಂತರ ತನ್ನ ಕನಸನ್ನು ನನಸಾಗಿಸುವ ಮೂಲಕ ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ, ರಿಯಾನಾ ತನ್ನ ಸ್ತ್ರೀ ವೇಷಕ್ಕಾಗಿ ಕೆಲವು ಭಕ್ತರು ಮತ್ತು ಪುರೋಹಿತರಿಂದ ಆಕ್ರೋಶ ಎದುರಿಸಬೇಕಾಯಿತು. ಅದಾದ ನಂತರ ತಾನು ಪುರುಷನಿಂದ ಬದಲಾಗಿರುವ ಸ್ತ್ರೀ ಎಂದು ಅವರಿಗೆ ವಿವರಿಸಿದರು, ಇವರಿಗೆ ಮಕ್ಕಳನ್ನು ಹೆರಲು ಸಾಧ್ಯವಿಲ್ಲ, ಹೀಗಾಗಿ ‘ದರ್ಶನ’ ಪಡೆಯಬಹುದಾಗಿದೆ.










