ಜನವರಿ 22ರ ನಂತರ ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ: ಸಿದ್ದರಾಮಯ್ಯ.

37
firstsuddi

ಶಿವಮೊಗ್ಗ: ಜನವರಿ 22ರ ನಂತರ ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ. ನಮ್ಮ ಕಾರ್ಯಕರ್ತರು ಕೂಡ ದೇವಸ್ಥಾನಕ್ಕೆ ಹೋಗ್ತಾರೆ. ಬಿಜೆಪಿಯ ರಾಜಕೀಯ ವಿರೋಧ ಹೊರತು ರಾಮನ ವಿರೋಧಿಗಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶ್ರೀರಾಮನಚಂದ್ರನ ವಿರೋಧಿಗಳಲ್ಲ. ನಾವು ಬಿಜೆಪಿ ರಾಜಕಾರಣಕ್ಕೆ ಮಾತ್ರ ವಿರೋಧ. ಶ್ರೀರಾಮನ ಭಕ್ತರು ನಾವು. ಆದರೆ ಇವರು ಶ್ರೀರಾಮನ ರಾಜಕೀಯ ಮಾಡಲು ಹೋಗುತ್ತಿದ್ದಾರೆ. ಅದರ ವಿರುದ್ಧವೇ ಹೊರತು ಶ್ರೀರಾಮನ ವಿರೋಧ ಮಾಡುತ್ತಿಲ್ಲ ಎಂದರು.

ಐದನೇ ಗ್ಯಾರೆಂಟಿ ಯೋಜನೆಯನ್ನು ಜಾರಗೊಳಿಸುತ್ತಿದ್ದೇವೆ. ಮತಕ್ಕಾಗಿ ಮಾಡಿದ ಕಾರ್ಯಕ್ರಮ ಇದಲ್ಲ. ಯುವಜನರ ಅನುಕೂಲಕ್ಕಾಗಿ ಮಾಡಿದ ಕಾರ್ಯಕ್ರಮ. ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ 5ನೇ ಗ್ಯಾರಂಟಿ ಯೋಜನೆ ಜಾರಿ ತಂದಿದ್ದೇವೆ. ಕುಮಾರಸ್ವಾಮಿಯೆಂದರೆ ಸುಳ್ಳು, ಸುಳ್ಳೆಂದರೆ ಕುಮಾರಸ್ವಾಮಿ. ಅವರ ಬಗ್ಗೆ ಹೆಚ್ಚು ಮಾತಾನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.