ಹೈದರಾಬಾದ್: ಇಲ್ಲಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಖಾಸಗಿ ಸಂಸ್ಥೆಯೊಂದರ ಬೆಳ್ಳಿಹಬ್ಬದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಸಂಭವಿಸಿದ ದುರ್ಘಟನೆಯಲ್ಲಿ ಖಾಸಗಿ ಸಂಸ್ಥೆಯೊಂದರ ಸಿಇಒ ಸಾವನ್ನಪ್ಪಿದ್ದಾರೆ.
ಅಮೆರಿಕ ಮೂಲದ ಸಾಫ್ಟ್‌ವೇರ್ ಕಂಪನಿ ವಿಸ್ಟೆಕ್ಸ್‌ನ ಮುಖ್ಯ ಕಾರ್ಯನಿವರ್ಹಣಾ ಅಧಿಕಾರಿಯಾಗಿದ್ದ ಸಂಜಯ್ ಷಾ ಹಾಗೂ ಕಂಪನಿಯ ಅಧ್ಯಕ್ಷರಾಗಿದ್ದ ರಾಜು ದತ್ಲಾ, ಸಮಾರಂಭದಲ್ಲಿ ಇರಿಸಲಾಗಿದ್ದ ಕಬ್ಬಿಣದ ಪಂಜರದ ಒಳಗೆ ಪ್ರವೇಶಿಸಿದ್ದರು. ಗುರುವಾರ ಸಂಜೆ ಈ ಕಾರ್ಯಕ್ರಮ ನಡೆದಿತ್ತು. ಭಾರೀ ಎತ್ತರದಲ್ಲಿ ಇಡಲಾಗಿದ್ದ ಈ ಐರನ್ ಕೇಜ್ಅನ್ನು ಸಡನ್ ಆಗಿ ಕೆಳಗಿಳಿಸುವ ಆಟ ಇದಾಗಿತ್ತು. ಆದರೆ, ಈರನ್ ಕೇಜ್‌ಗೆ ಹಾಕಲಾಗಿದ್ದ ಕಬ್ಬಿಣದ ಚೈನು ತುಂಡಾಗಿದ್ದರಿಂದ ಕೇಜ್ ಕುಸಿದು ಬಿದ್ದಿತ್ತು. ಅದರೊಳಗಿದ್ದ ಇಬ್ಬರೂ ಮೇಲಿಂದ ಬಿದ್ದಿದ್ದರು.
ತಕ್ಷಣವೇ ಇಬ್ಬರಲ್ಲೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಯ ವೇಳೆಯೇ ಸಂಜಯ್ ಶಾ ಸಾವನ್ನಪ್ಪಿದ್ದರೆ, ರಾಜು ದತ್ಲಾ ಗಂಭೀರವಾಗಿ ಗಾಯಗೊಂಡಿದ್ದು, ಅವರ ಪರಿಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪನಿಯ ಮತ್ತೊಬ್ಬ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಫಿಲ್ಮ್ ಸಿಟಿ ಈವೆಂಟ್ ಮ್ಯಾನೇಜ್‌ಮೆಂಟ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.










