ಬೆಂಗಳೂರು: ವಿಶೇಷವಾಗಿ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿ ಒಂದು ನಾಣ್ಯದ ಎರಡು ಮುಖದ ರೀತಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಸೋಮಣ್ಣ ಹಾಡಿ ಹೊಗಳಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆಯಾದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನವನ್ನು ಸ್ವಾಗತ ಮಾಡುತ್ತೇನೆ. ಶೆಟ್ಟರ್ ಅವರು ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳು. ತೀರ್ಮಾನ ಮಾಡುವಾಗ ಒಂದೊಂದು ಸಾರಿ ಎಷ್ಟರ ಮಟ್ಟಿಗೆ ಅನ್ನೋದಕ್ಕಿಂತ, ಅವರ ಹಿರಿಯ ಅನುಭವ ಇಟ್ಟುಕೊಂಡು ಅಮಿತ್ ಶಾ, ನಡ್ಡಾಜೀ ಅವರು ಪ್ರಧಾನಿಗಳ ಸಲಹೆ ಮೇರೆಗೆ ಈ ಕೆಲಸ ಮಾಡಿದ್ದಾರೆ. ಇದನ್ನ ನಾನು ಸ್ವಾಗತ ಮಾಡುತ್ತೇನೆ. ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಾಗ ರಾಜ್ಯಾದ್ಯಂತ ಓಡಾಡಿದ್ದಾರೆ. ಮೋದಿ ಅವರು ಮತ್ತೆ ಪ್ರಧಾನಿ ಆಗಲಿ ಅಂತಾ ದೇಶದ ಅಭಿವೃದ್ಧಿ ನೋಡಿಕೊಂಡು ಮತ್ತೆ ಬಿಜೆಪಿಗೆ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.










