ಮೋದಿ ಹಿಂದುಳಿದ ವರ್ಗದ (ಒಬಿಸಿ) ಕುಟುಂಬದಲ್ಲಿ ಜನಿಸಿಲ್ಲ: ರಾಹುಲ್ ಗಾಂಧಿ.

44
firstsuddi

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ಒಡಿಶಾದ ಜಾರಸುಗುಡದಲ್ಲಿ ತಮ್ಮ ಭಾರತ್ ನ್ಯಾಯ ಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ಮೋದಿ ಅವರು ಹಿಂದುಳಿದ ವರ್ಗದ ಕುಟುಂಬದಲ್ಲಿ ಹುಟ್ಟಿದ್ದೇನೆ ಎಂದು ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮೋದಿ ಅವರು ತೇಲಿ ಜಾತಿಯಲ್ಲಿ ಹುಟ್ಟಿದರು. 2000 ಇಸ್ವಿಯಲ್ಲಿ ಗುಜರಾತ್ನಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಲಾಯಿತು. ಆದ್ದರಿಂದ ಮೋದಿ ಹುಟ್ಟಿನಿಂದ ಒಬಿಸಿಯಲ್ಲ. ಈ ಕಾರಣಕ್ಕೆ ಮೋದಿ ಒಬಿಸಿಗಳೊಂದಿಗೆ ಕೈಕುಲುಕುವುದಿಲ್ಲ. ಕೋಟ್ಯಾಧಿಪತಿಗಳನ್ನು ತಬ್ಬಿಕೊಳ್ಳುತ್ತಾರೆ ಎಂದರು.

ಸಾಮಾನ್ಯ ಜಾತಿಗೆ ಸೇರಿದ ಕುಟುಂಬದಲ್ಲಿ ಮೋದಿ ಜನಿಸಿದ್ದಾರೆ. ಒಬಿಸಿಯಲ್ಲಿ ಜನಿಸದ ಕಾರಣ ಮೋದಿ ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿಯನ್ನು ನಡೆಸಲು ಬಿಡುವುದಿಲ್ಲ ಎಂದು ಹೇಳಿದರು.