ಶಿವಮೊಗ್ಗ: ಪ್ರೀತಿಯ ಕಾಟಕ್ಕೆ ಬೇಸತ್ತು ಅಪ್ರಾಪ್ತೆ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಗೊಂದಿಚಟ್ನಿಹಳ್ಳಿಯಲ್ಲಿ ನಡೆದಿದೆ.
ವರ್ಷಿಣಿ (14 ವರ್ಷ) ಮೃತ ಬಾಲಕಿ. ತ್ಯಾಗರಾಜ್ ಎಂಬ ಯುವಕ ಈಕೆಗೆ ಪ್ರೀತಿಸುವಂತೆ ನಿತ್ಯ ಕಾಡುತ್ತಿದ್ದನು. ಈ ವಿಚಾರ ತಿಳಿದ ವರ್ಷಿಣಿ ಪೋಷಕರು ಎರಡು ತಿಂಗಳ ಹಿಂದೆ ತ್ಯಾಗರಾಜ್ಗೆ ಎಚ್ಚರಿಕೆ ನೀಡಿದ್ದರು. ಆದರೂ ಬಿಡದ ತ್ಯಾಗರಾಜ್ ಪ್ರೀತಿಸುವಂತೆ ಪೀಡಿಸುವುದನ್ನು ಮುಂದುವರೆಸಿದ್ದನು.
ಇದೀಗ ಬಾಲಕಿ ಯುವಕನ ಕಾಟ ತಾಳಲಾರದೇ ಶನಿವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










