ಹಬ್ಬಕ್ಕೆ ಕರೆದೊಯ್ಯಲು ಪತಿ ಬರಲಿಲ್ಲವೆಂದು ಮನನೊಂದು ಪತ್ನಿ ಆತ್ಮಹತ್ಯೆ…

33
firstsuddi

ಚಾಮರಾಜನಗರ: ಹಬ್ಬಕ್ಕೆ ತನ್ನ ಪತಿ ಕರೆದೊಯ್ಯಲು ಬರಲಿಲ್ಲವೆಂದು ಮನನೊಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.

ರಚನಾ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಐದು ವರ್ಷಗಳ ಹಿಂದೆ ಕೊತ್ತಲವಾಡಿಯ ಸೋಮೇಶ್ ಜೊತೆ ರಚನಾಳ ವಿವಾಹವಾಗಿತ್ತು. ಆದರೆ, ಕೌಟಂಬಿಕ ಕಲಹ ಹಿನ್ನಲೆ ರಚನಾ ತನ್ನ ತವರು ಮನೆ ಸೇರಿದ್ದಳು.

ಇಂದು ಕೊತ್ತಲವಾಡಿಯಲ್ಲಿ ಮಾರಮ್ಮನ ಹಬ್ಬವಿತ್ತು. ಈ ಹಬ್ಬಕ್ಕೆ ಕರೆದೊಯ್ಯಲು ಪತಿ ಬರುತ್ತಾನೆ ಎಂದು ರಚನಾ ಕಾದು ಕುಳಿತಿದ್ದಳು. ಆದರೆ, ಪತಿ ಸೋಮೇಶ್ ಬರಲೇ ಇಲ್ಲ. ಇದರಿಂದ ಮನನೊಂದ ರಚನಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ಥಳಕ್ಕೆ ಆಗಮಿಸಿದ ಟೌನ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.