ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಅಧಿಕಾರ ನನಗಿಲ್ಲ: ಡಿಕೆ ಶಿವಕುಮಾರ್.

40
firstsuddi

ಬೆಂಗಳೂರು: ಹೊಸ ಆಸ್ತಿ ತೆರಿಗೆ ಮತ್ತು ಖಾತಾ ವ್ಯವಸ್ಥೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ, ಇಂದು ಸಾಯಂಕಾಲ ಕೆಪಿಸಿಸಿ ಸಭೆಯೊಂದನ್ನು ನಡೆಸಿ ಉಳಿದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯೊಂದನ್ನು ತಯಾರು ಮಾಡಲಿದೆ ಎಂದು ಹೇಳಿದರು.

ಆದರೆ, ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಅಧಿಕಾರ ತನಗಿಲ್ಲ, ಪಟ್ಟಿಯನ್ನು ತೆಗೆದುಕೊಂಡು ದೆಹಲಿಗೆ ಹೋಗುತ್ತೇವೆ, ಅಭ್ಯರ್ಥಿಗಳ ಹೆಸರನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಪರಾಮರ್ಶೆ ನಡೆಸುತ್ತದೆ. ಕೆಪಿಸಿಸಿ ನೀಡಿದ ಪಟ್ಟಿಯನ್ನೇ ಸಿಇಸಿ ಅಂತಿಮಗೊಳಿಸುತ್ತದೆ ಅಂತಿಲ್ಲ, ಅವರು ಕೆಲ ಹೆಸರುಗಳನ್ನು ತೆಗೆದುಹಾಕಿ ತಮಗೆ ಸರಿಯೆನಿಸಿದ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಬಹುದು ಮತ್ತು ಅಂತಿಮ ಪಟ್ಟಿಯನ್ನು ಸಹ ವರಿಷ್ಠರೇ ಘೋಷಣೆ ಮಾಡುತ್ತಾರೆ ಎಂದು ಶಿವಕುಮಾರ್ ಹೇಳಿದರು.