ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದ ಎ.ಎಸ್ ಚಿನ್ಮಯ್.

74

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಚಿನ್ಮಯ್ ಎ.ಎಸ್ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದು, 600 ಅಂಕಗಳಿಗೆ 592 ಅಂಕಗಳನ್ನು ಗಳಿಸಿದ್ದಾರೆ.

ಚಿನ್ಮಯ್ ಅವರು ಕೊಪ್ಪ ತಾಲೂಕಿನ ಜಯಪುರ ಹೋಬಳಿ ವಂದಗದ್ದೆ ಗ್ರಾಮದ ಎ.ಸಿ ಸಂಪತ್ ಕುಮಾರ್ ಹಾಗೂ ಇಂಪಾ ದಂಪತಿ ಪುತ್ರ.

ತಂದೆ ತಾಯಿ ಹಾಗೂ ನಮ್ಮ ಕಾಲೇಜಿನ ಉಪನ್ಯಾಸಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಿದ್ದೇನೆ, ಮುಂದೆ ನನಗೆ ಸಿಎ ಆಗಬೇಕು ಎಂಬ ಕನಸಿದೆ ಎಂದರು.

ಚಿನ್ಮಯ್ ಅವರು ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜ್ ವಿದ್ಯಾರ್ಥಿಯಾಗಿದ್ದು, ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.