ಚಿಕ್ಕಮಗಳೂರು: ಬಸವನಹಳ್ಳಿಯ ಮಹಿಳಾ ಶ್ರಮದ ಮಾಜಿ ಕಾರ್ಯದರ್ಶಿ ಗಮಕಿ ಶಾರದಾ ಕೃಷ್ಣಮೂರ್ತಿ ನಿಧನ…

56
firstsuddi

ಚಿಕ್ಕಮಗಳೂರು: ನಗರದ ಬಸವನಹಳ್ಳಿಯ ಮಹಿಳಾ ಶ್ರಮದ ಮಾಜಿ ಕಾರ್ಯದರ್ಶಿ ಗಮಕಿ ಶಾರದಾ ಕೃಷ್ಣಮೂರ್ತಿ (89) ಅವರು ಬೆಂಗಳೂರಿನಲ್ಲಿ ನಿನ್ನೆ ನಿಧನರಾದರು.

ಕಳೆದ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.

25 ವರ್ಷಗಳ ಕಾಲ ಬಸವನಹಳ್ಳಿಯ ಮಹಿಳಾ ಶ್ರಮದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಬೆಳವಣಿಗೆಗೆ ಕಾರಣರಾಗಿದ್ದ ಅವರು ಆಸಕ್ತ ಮಕ್ಕಳಿಗೆ ಗಮಕ ಪಾಠ ಮಾಡುತ್ತಿದ್ದರು.