ಗುಡುಗು ಸಿಡಿಲು ಸಹಿತ ಮಳೆ- ಸಿಡಿಲು ಬಡಿದು ಬಾಲಕ ಸಾವು…

36
firstsuddi

ಕೊಪ್ಪಳ: ಜಿಲ್ಲೆಯ ಕೆಲವೆಡೆ ನಿನ್ನೆ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದ ಪರಿಣಾಮ ಕುರಿ ಮೇಯಿಸುತ್ತಿದ್ದ ಬಾಲಕ ಸಾವಿಗೀಡಾದ ಘಟನೆ ನಿನ್ನೆ ಸಂಜೆ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಜರುಗಿದೆ.

ಶ್ರೀನಿವಾಸ ಗೊಲ್ಲರ(16) ಮೃತ ಬಾಲಕ. ಬಾಲಕನ ಜೊತೆಗಿದ್ದ ತಂದೆಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಜಮೀನಿನಲ್ಲಿ ಸಂಜೆ ಕುರಿ ಮೇಯಿಸುತ್ತಿದ್ದಾಗ ಈ ಘಟನೆ ಜರುಗಿದೆ.

ಘಟನೆ ಸಂಬಂಧ ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.