ಭಾರತದಲ್ಲಿ ಚಿನ್ನ, ಬೆಳ್ಳಿ ದರ ಸತತ ಇಳಿಕೆ.

51

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆಯಾಗಿದೆ. ನಿನ್ನೆ ಗ್ರಾಂ ಗೆ 15 ರಿಂದ 16 ರೂನಷ್ಟು ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಒಂದು ರೂನಷ್ಟು ಅಗ್ಗಗೊಂಡಿದೆ. ಬೆಳ್ಳಿ ಬೆಲೆಯೂ ಇಂದು ಗ್ರಾಂ ಗೆ ಒಂದು ರೂನಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲಿ ನಿನ್ನೆ ಚಿನ್ನದ ಬೆಲೆ ಒಂದಷ್ಟು ಏರಿಕೆ ಆಗಿತ್ತು. ಇವತ್ತು ಬಹುತೇಕ ತಟಸ್ಥವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಇಂದು ಬಡ್ಡಿದರ ಎಷ್ಟು ಕಡಿತಗೊಳಿಸಬಹುದು ಎನ್ನುವ ಕುತೂಹಲ ಹೂಡಿಕೆದಾರರಲ್ಲಿ ಇದೆ. ಇದೇ ನಿರೀಕ್ಷೆಯಲ್ಲಿ ಚಿನಿವಾರಪೇಟೆಯಲ್ಲಿ ಎಂದಿನಂತೆ ಇಂದು ವ್ಯವಹಾರ ಗೌಣವಾಗಿದೆ. ಇಂದು ರಾತ್ರಿ ಫೆಡರಲ್ ರಿಸರ್ವ್ ತನ್ನ ದರ ಪರಿಷ್ಕರಣೆ ನಿರ್ಧಾರ ಪ್ರಕಟಸಲಿದೆ. 25 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ ಆಗುವ ನಿರೀಕ್ಷೆ ಕಳೆದ ಒಂದು ತಿಂಗಳಿಂದಲೂ ಇದೆ. ಒಂದು ವೇಳೆ 50 ಮೂಲಾಂಕಗಳಷ್ಟು ದರ ಇಳಿಕೆಯಾದರೆ ಚಿನಿವಾರ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಬಹುದು. ಭಾರತದಲ್ಲಿ ಸದ್ಯ 10 ಗ್ರಾಂ ನ 22 ಕ್ಯಾರಟ್ ಚಿನ್ನದ ಬೆಲೆ 68,640 ರೂಪಾಯಿ ಇದೆ. 24 ಕ್ಯಾರಟ್‍ನ ಅಪರಂಜಿ ಚಿನ್ನದ ಬೆಲೆ 74,880 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 9,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 68,640 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಂ ಗೆ 8,600 ರೂಪಾಯಿಯಲ್ಲಿ ಇದೆ.
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.