ಚಿಕ್ಕಮಗಳೂರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಿಜಿಎಸ್ ಕಾಲೇಜಿನ 45 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.

95

ಚಿಕ್ಕಮಗಳೂರು: ನಗರದ ಜಿಲ್ಲಾ ಆಟದ ಮೈದಾನದಲ್ಲಿ ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಿ.ಜಿ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಪಂದ್ಯಾವಳಿಯ ಬಹುತೇಕ ವಿಭಾಗಗಳಲ್ಲಿ ಜಯಗಳಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಕ್ರೀಡಾಕೂಟದಲ್ಲಿ ಬಿಜಿಎಸ್ ಕಾಲೇಜಿನ 73 ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, ಅವರಲ್ಲಿ 45 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 800 ಮೀ. ಓಟದ ಸ್ಪರ್ಧೆಯಲ್ಲಿ ಬಿಜಿಎಸ್ ನ ವರ್ಷಿತಾ ಡಿ. ಮೋಹನ್, ಯೋಗ ಸ್ಪರ್ಧೆಯಲ್ಲಿ ಆರ್.ಮೇಘನಾ, ಈಜಿನಲ್ಲಿ ಎಲ್.ಆರ್.ಲಿಖಿತ್, ಟೆಕ್ವಾಂಡೋ ಸ್ಪರ್ಧೆಯಲ್ಲಿ ಅಮೃತೇಶ್, ಶಿವಕುಮಾರ್, ಪಂದಳೇಶ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಿಲಂಬಂ ಸ್ಪರ್ಧೆಯಲ್ಲಿ ಸೂರ್ಯ ಪ್ರಕಾಶ್, ಸುನಿಲ್ ಮೂಲ್ಯ, ಫುಟ್ಬಾಲ್‍ನಲ್ಲಿ ಕಿಶೋರ್ ಮತ್ತು ತಂಡ, ಹಾಕಿಯಲ್ಲಿ ಹೃತಿಕ್ ಮತ್ತು ತಂಡ, ತನು ಮತ್ತು ತಂಡ ಗೆಲುವು ಸಾಧಿಸುವ ಮೂಲಕ ರಾಜ್ಯಮಟ್ಟಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಪ್ರಾಚಾರ್ಯ ಜೆ.ಜಿ.ಸುರೇಂದ್ರ ಅಭಿನಂದಿಸಿದ್ದಾರೆ.