ಮುನಿರತ್ನರಿಂದ HIV ಹನಿಟ್ರ್ಯಾಪ್; ಬಿಜೆಪಿ ನಾಯಕರಿಗೆ ಖೆಡ್ಡಾ.

44

ಬೆಂಗಳೂರು, ಜಾತಿ ನಿಂದನೆ ಆರೋಪದಡಿ ಜೈಲು ಸೇರಿದ್ದ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣವು ದಾಖಲಾಗಿದ್ದು, ತನ್ನ ರಾಜಕೀಯ ವಿರೋಧಿಗಳನ್ನ ಮಟ್ಟ ಹಾಕಲು ಹೊಸ ಷಡ್ಯಂತ್ರವನ್ನ ರೂಪಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ರಾಜಕೀಯ ಎದುರಾಳಿಗಳನ್ನ ಸೆದೆ ಬಡಿಯಲು HIV ಹನಿಟ್ರ್ಯಾಪ್ ನಡೆಸುತ್ತಿದ್ದರು ಎಂಬ ಸ್ಟೋಟಕ ಮಾಹಿತಿ ಬಹಿರಂಗವಾಗಿದೆ.
ರಾಜಕೀಯ ಎದುರಾಳಿಯಾಗಿದ್ದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ ಕೆ ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರನ್ನ ಮಟ್ಟ ಹಾಕಲು ಬಿಜೆಪಿ ಶಾಸಕರಾದ ಮುನಿರತ್ನ ಅವರು ಹೊಸ ಷಡ್ಯಂತ್ರ ರೂಪಿಸಿದ್ರು ಎಂಬ ಮಾಹಿತಿ ತಿಳಿದು ಬಂದಿದ್ದು, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರಿಗೆ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮುನಿರತ್ನ ಅವರಿಂದ ತಂತ್ರಗಾರಿಕೆ ನಡೆದಿತ್ತು ಎನ್ನುವ ಕುರಿತು ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿದೆ.
ಇದಕ್ಕಾಗಿ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮೂವರ ತಂಡವನ್ನ ಮುನಿರತ್ನ ನಿಯೋಜಿಸಿದ್ದರು ಎಂದು ಹೇಳಲಾಗಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಎದುರಾಳಿಗಳಿಗೆ ಮಾತ್ರವನ್ನ ಬಿಜೆಪಿ ಪಕ್ಷದ ಒಕ್ಕಲಿಗ ಸಮುದಾಯದ ಹಿರಿಯ ನಾಯಕರಿಗರ ಮುನಿರತ್ನ ಅವರು ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಪ್ಲಾನ್ ಹಾಕಿಕೊಂಡಿದ್ದರು ಎಂದು ಖಾಸಗಿ ಸುದ್ದಿ ಮಾಹಿನಿ ವರದಿ ಮಾಡಿದೆ.
ಬಿಜೆಪಿ ಪಕ್ಷದ ಒಕ್ಕಲಿಗ ಸಮುದಾಯದ ಹಿರಿಯ ನಾಯಕ ಹಾಗೂ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರಿಗೆ ಹೂ ಗುಚ್ಛ ನೀಡುವ ನೆಪದಲ್ಲಿ ಇಂಜೆಕ್ಟ್ ಮಾಡಲು ಮುನಿರತ್ನ ಅವರು ಪ್ಲ್ಯಾನ್ ಹಾಕಿಕೊಂಡಿದ್ದರು ಎಂದು ಹೇಳಲಾಗಿದೆ. ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡುವ ಕೆಲಸಕ್ಕಾಗಿ ತನ್ನ ಅಭಿಮಾನಿಯನ್ನೇ ಮುನಿರತ್ನ ಅವರು ನಿಯೋಜಿಸಿದ್ದರು. ಕೈಗೆ ಗ್ಲೌಸ್ ಹಾಕಿಕೊಂಡು ಅದರಲ್ಲಿ ಬ್ಲೇಡ್ ಅಳವಡಿಸಿದ್ದಂತೆ, ಆ ಗ್ಲೌಸ್ ನಲ್ಲಿ HIV ಸೋಂಕಿತೆಯ ರಕ್ತದ ಟ್ಯೂಬ್ ಅಂಟಿಸಿದ್ದರು ಎಂದು ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮುನಿರತ್ನ ಅವರ ಅಭಿಮಾನಿ ಸ್ಟೋಕಟ ಹೇಳಿಕೆಯನ್ನ ನೀಡಿದ್ದಾರೆ.