‘ಸ್ವಚ್ಛ ಭಾರತ್ ಮಿಷನ್’ಗೆ ದಶಕದ ಸಂಭ್ರಮ; ಮೋದಿ ವಿಡಿಯೋ ಹಂಚಿಕೊಂಡ ಹೆಚ್‍ಡಿ ಕುಮಾರಸ್ವಾಮಿ.

27

ಬೆಂಗಳೂರು: ದೇಶವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಜಾರಿಗೊಳಿಸಲಾಗಿದ್ದ ‘ಸ್ವಚ್ಛ ಭಾರತ್ ಮಿಷನ್’ ಯೋಜನೆ ಜಾರಿಯಾಗಿ ಇಂದಿಗೆ 10 ವರ್ಷಗಳು ಪೂರ್ಣಗೊಂಡಿವೆ. ಈ ಸಂಬಂಧ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭವಿಷ್ಯದ ಪೀಳಿಗೆಗಾಗಿ ಸ್ವಚ್ಛ, ಸುಂದರ ಮತ್ತು ಸಮರ್ಥ ಭಾರತಕ್ಕಾಗಿ ಕೆಲಸ ಮಾಡುತ್ತಲೇ ಇರೋಣ ಎಂದು ಬರೆದುಕೊಂಡಿದ್ದಾರೆ. ನಾವು ಸ್ವಚ್ಛ ಭಾರತ್ ಮಿಷನ್‍ನ 10 ವರ್ಷಗಳನ್ನು ಮತ್ತು ಮಹಾತ್ಮ ಗಾಂಧಿಯವರ 155 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ, ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಂದ ಪರಿವರ್ತನೆಯನ್ನು ಗೌರವಿಸುತ್ತೇವೆ. ಮೋದಿಯವರ ದೃಷ್ಟಿ. ಅವರ ನಾಯಕತ್ವವು ಗಾಂಧೀಜಿಯವರ ಸ್ವಚ್ಛ, ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸಿದೆ. ರಾಷ್ಟ್ರದಾದ್ಯಂತ ಲಕ್ಷಾಂತರ ಜನರನ್ನು ಸಬಲೀಕರಣಗೊಳಿಸಿದೆ. ಭವಿಷ್ಯದ ಪೀಳಿಗೆಗಾಗಿ ಸ್ವಚ್ಛ, ಸುಂದರ ಮತ್ತು ಸಮರ್ಥ ಭಾರತಕ್ಕಾಗಿ ಕೆಲಸ ಮಾಡುತ್ತಲೇ ಇರೋಣ ಎಂದು ಹೆಚ್‍ಡಿ ಕುಮಾರಸ್ವಾಮಿಯವರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ 155 ನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ಹಮ್ಮಿಕೊಂಡಿರುವ “ಸ್ವಚ್ಛ ಭಾರತ್ ದಿವಸ 2024” ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೋದಿಯವರು 9,600 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನೈರ್ಮಲ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಹಲವಾರು ನೂತನ ಯೋಜನೆಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದು ಅಮೃತ್ ಮತ್ತು ಅಮೃತ್ 2.0 ಅಡಿಯಲ್ಲಿ 6,800 ಕೋಟಿ ರೂಪಾಯಿ ಮೌಲ್ಯದ ನಗರ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿರುವ ಯೋಜನೆಗಳನ್ನು ಕೂಡ ಒಳಗೊಂಡಿದೆ.