ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದ ವೇಳೆ ವರ್ತೂರು ಹೊಳೆಯಲ್ಲಿ ಕೊಚ್ಚಿ ಹೋದ ಯುವಕ.

27

ಬೆಂಗಳೂರು: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ 19 ವರ್ಷದ ಯುವಕ ಗುರುವಾರ ಬೆಳಗ್ಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದ ವೇಳೆ ವರ್ತೂರು ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಆತನ ಪತ್ತೆಗೆ ಹುಡುಕಾಟ ನಡೆಯುತ್ತಿದೆ. ಗುರುವಾರ ಬೆಳಿಗ್ಗೆ ಇಝಾರುಲ್ ಎಸ್.ಕೆ ಎಂಬಾತ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದ ವೇಳೆ ಕಾಲು ಜಾರಿ ವರ್ತೂರು ಹೊಳೆಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾನೆ. ವರ್ತೂರು ಬಳಿಯ ಶೆಡ್‍ಗಳಲ್ಲಿ ವಾಸಿಸುವ ಇಝರುಲ್ ಮತ್ತು ಅವರ ಇಬ್ಬರು ಚಿಕ್ಕಪ್ಪಂದಿರ ಜೊತೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಹೊಳೆ ಬಳಿ ಪ್ಲಾಸ್ಟಿಕ್ ತ್ಯಾಜ್ಯದ ಬಾಟಲಿಗಳು ಮತ್ತು ಚೀಲಗಳನ್ನು ಎಸೆಯಲು ಹೋಗಿದ್ದರು ಈ ಸಮಯದಲ್ಲಿ ಘಟನೆ ನಡೆದಿದೆ.
ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಹೊಳೆ ಉಕ್ಕಿ ಹರಿಯುತ್ತಿತ್ತು. ಇಝರುಲ್ ಅವರ ಚಿಕ್ಕಪ್ಪರು ಅವನನ್ನು ತುಂಬಿ ಹರಿಯುತ್ತಿದ್ದ ಹೊಳೆಯಿಂದ ಕಾಪಾಡಲು ಪ್ರಯತ್ನಿಸಿದರು, ಆದರೆ ಈಜು ಬಾರದ ಕಾರಣ ಯುವಕ ಹೊಳೆಯಲ್ಲಿ ಕೊಚ್ಚಿಹೊಗಿದ್ದಾನೆ. ಶೋಧ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮತ್ತು ಬಿಬಿಎಂಪಿ ಸಿಬ್ಬಂದಿ ಕತ್ತಲೆಯಾದ ಕಾರಣ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದರು. ಶುಕ್ರವಾರ ಶೋಧವನ್ನು ಪುನರಾರಂಭಿಸಲಿದ್ದಾರೆ ಎಂದು ಅಲ್ಲಿನ ಸ್ಥಳಿಯ ಪೊಲೀಸರು ತಿಳಿಸಿದ್ದಾರೆ.