ನವದಂಪತಿ ದೇವಸ್ಥಾನಕ್ಕೆ ತೆರಳಿದ್ದಾಗ ಪತಿಯ ಎದುರೇ ಪತ್ನಿಯ ಮೇಲೆ ಗ್ಯಾಂಗ್ ರೇಪ್.

34

ರೇವಾ: ಮಧ್ಯಪ್ರದೇಶದ ರೇವಾ ಜಿಲ್ಲೆಯ ಗುರ್ಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಪತಿಯ ಎದುರೆ ಪತ್ನಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಆರೋಪಿಗಳು ದೇವಸ್ಥಾನಕ್ಕೆ ತೆರಳಿದ್ದ ನವದಂಪತಿಯನ್ನು ಸುತ್ತುವರೆದು, ಪತಿಯನ್ನು ಮರಕ್ಕೆ ಕಟ್ಟಿಹಾಕಿ ಪತ್ನಿ ಮೇಲೆ ಸಾಮೂಹಿತ ಅತ್ಯಾಚಾರ ನಡೆಸಿದ್ದಾರೆ.
ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವದಂಪತಿ ತಮ್ಮ ದಾಂಪತ್ಯ ಜೀವನ ಸುಖಕರವಾಗಿರಲೆಂದು ಬಯಸಿ ಭೈರವನಾಥ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಐವರು ಆರೋಪಿಗಳು ಪತಿಯನ್ನು ಮರಕ್ಕೆ ಕಟ್ಟಿಹಾಕಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಅಲ್ಲದೆ ಆರೋಪಿಗಳು ಮಹಿಳೆಯ ಮೇಲಿನ ಗ್ಯಾಂಗ್ ರೇಪ್ ಅನ್ನು ವಿಡಿಯೋ ಮಾಡಿಕೊಂಡಿದ್ದು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹಲವು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ.
ಅತ್ಯಾಚಾರ ಎಸಗಿರುವ ಎಂಟು ಆರೋಪಿಗಳು  ಘಟನೆ ನಡೆದ ಸ್ಥಳದಲ್ಲಿ ಪಾರ್ಟಿ ಮಾಡುತ್ತಿದ್ದರು. ಘಟನೆ ನಡೆದ ಸ್ಥಳದಲ್ಲಿ ಲಿಟ್ಟಿ, ಮಾಂಸ ಮತ್ತು ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಆರೋಪಿಗಳು ರೇವಾ ಜಿಲ್ಲೆಯವರಾಗಿದ್ದು ಅಕ್ಟೋಬರ್ 22ರಂದು ಪ್ರಕರಣ ದಾಖಲಾಗಿದೆ ಪೋಲೀಸರು ಎಂದು ತಿಳಿಸಿದ್ದಾರೆ.