ಬುದ್ಧಿವಂತಿಕೆ ಸ್ಪರ್ಧೆಯಲ್ಲಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾದ ಕಾಫಿನಾಡಿನ ಪ್ರತಿಭೆ.

64

ಚಿಕ್ಕಮಗಳೂರು: ಸಾಮಾನ್ಯ ಜ್ಞಾನ ಮತ್ತು ಬುದ್ಧಿವಂತಿಕೆ ಸ್ಪರ್ಧೆಯಲ್ಲಿ ಕಾಫಿ ಕಣಿವೆಯ ಕುಡಿ ಅಸಾಮಾನ್ಯ ಪ್ರತಿಭೆ ಪ್ರದರ್ಶಿಸುವ ಮೂಲಕ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡು ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ನಗರದ ಶ್ರೀ ವೆಂಕಟೇಶ್ವರ ಫ್ರೇಂ ವರ್ಕ್ಸ್ ನ ಮಾಲೀಕ ಎಂ.ಎಲ್.ವೆಂಕಟೇಶಮೂರ್ತಿ ಹಾಗೂ ಶೋಭಾ ದಂಪತಿಯ ಮೊಮ್ಮಗ ಕೇವಲ ಆರು ವರ್ಷದ ಶ್ರೀವಿಕ್ ಹೆಚ್. ನಿತಿನ್ ನಾಲ್ಕು ನಿಮಿಷಗಳ ಅವಧಿಯಲ್ಲಿ 135 ಬ್ರಾಂಡ್ ಲೋಗೋಗಳನ್ನು ಗುರುತಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಈ ಹಿಂದೆಯೂ ಶ್ರೀವಿಕ್ ಕೇವಲ ಎರಡು ವರ್ಷದ ಬಾಲಕನಾಗಿದ್ದಾಗ ತನ್ನ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡು ಅಚ್ಚರಿ ಮೂಡಿಸಿದ್ದ.