ಬೆಂಗಳೂರು : ಆಭರಣ ಪ್ರಿಯರಿಗೆ ಗುಡ್ ನ್ಯೂಸ್. ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಸೋಮವಾರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.79,975 ರಷ್ಟಿದ್ದರೆ, ಬುಧವಾರ ರೂ.1,110ರಷ್ಟು ಇಳಿಕೆಯಾಗಿ ರೂ.78,865ಕ್ಕೆ ತಲುಪಿದೆ. ಸೋಮವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ 91,556 ರೂ.ಗಳಾಗಿದ್ದರೆ, ಬುಧವಾರ ಅದು 201 ರೂ.ಕಡಿಮೆ ಆಗಿ 91,355 ರೂ.ಗೆ ವಹಿವಾಟು ನಡೆಸಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಕಡಿಮೆಯಾಗಿವೆ. ಸೋಮವಾರ ಒಂದು ಔನ್ಸ್ ಚಿನ್ನದ ಬೆಲೆ 2,654 ಡಾಲರ್ ಆಗಿದ್ದರೆ, ಬುಧವಾರದ ವೇಳೆಗೆ 8 ಡಾಲರ್ ಇಳಿಕೆಯಾಗಿ 2,646 ಡಾಲರ್ ತಲುಪಿದೆ. ಪ್ರಸ್ತುತ ಒಂದು ಔನ್ಸ್ ಬೆಳ್ಳಿಯ ಬೆಲೆ 30.40 ಡಾಲರ್ ಆಗಿದೆ. ದೇಶೀಯ ಷೇರು ಮಾರುಕಟ್ಟೆಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ನಷ್ಟದೊಂದಿಗೆ ವಹಿವಾಟು ಆರಂಭಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಋಣಾತ್ಮಕ ಸಂಕೇತಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಖರೀದಿಗೆ ಹಿಂಜರಿಯುತ್ತಿದ್ದಾರೆ.










