ಪಾರ್ಸೆಲ್‍ನಲ್ಲಿ ಬಂದ ಶವ, ಆರೋಪಿಯ ಬಂಧನ.

30

ಪಾರ್ಸೆಲ್‍ನಲ್ಲಿ ಶವವಿಟ್ಟು ಕಳುಹಿಸಿದ್ದ ಆರೋಪಿ ಶ್ರೀಧರ್ ವರ್ಮಾ ಎಂಬಾತನನ್ನು ಪಶ್ಚಿಮ ಗೋದಾವರಿ ಪೊಲೀಸರು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ವರ್ಮಾ ಅವರನ್ನು ಹೈದರಾಬಾದ್‍ನಲ್ಲಿ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಭೀಮಾವರಂಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ. ಡಿ.19 ರಂದು ಉಂಡಿ ಮಂಡಲದ ಯಂಡಗಂಡಿ ಗ್ರಾಮದ ನಾಗ ತುಳಸಿ ಎಂಬುವರು ಕ್ಷತ್ರಿಯ ಸೇವಾ ಸಮಿತಿಯಿಂದ ಪಾರ್ಸೆಲ್ ಸ್ವೀಕರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಎಲೆಕ್ಟ್ರಿಕಲ್ ಉಪಕರಣಗಳು ಇರಬೇಕಿದ್ದ ಪಾರ್ಸೆಲ್‍ನಲ್ಲಿ ಶವ ಪತ್ತೆಯಾಗಿತ್ತು. ಮೃತರನ್ನು ಕಲ್ಲ ಮಂಡಲದ ಗಾಂಧಿನಗರ ಗ್ರಾಮದ ನಿವಾಸಿ ಬ್ಯಾರೆ ಪರ್ದಲಯ್ಯ ಎಂದು ಗುರುತಿಸಲಾಗಿದೆ. ಶ್ರೀಧರ್ ವರ್ಮಾ ಮೋಸದ ಜಾಲವನ್ನೇ ಹೆಣೆದಿದ್ದ. ಹಾಗೂ ಆತ ಮೂರು ಜನ ಮಹಿಳೆಯರನ್ನು ವಿವಾಹವಾಗಿದ್ದ. ಆರೋಪಿ ಮೂರು ಜಿಲ್ಲೆಗಳಲ್ಲಿ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ವರದಿ ತಿಳಿಸಲಾಗಿದೆ. ಆತ ಉದ್ದೇಶಪೂರ್ವಕವಾಗಿಯೇ ತುಳಸಿಯವರಿಗೆ ಪಾರ್ಸೆಲ್ ಕಳುಹಿಸಿದ್ದಾನೆ ಎಂದು ಹೇಳಲಾಗಿದೆ. ಆಸ್ತಿಗಾಗಿ ಈ ಕೃತ್ಯವೆಸಗಿದ್ದಾನೆ ಎಂದು ತಿಳಿಸಲಾಗಿದೆ. ಕೆಲಸವಿದೆ ಎಂದು ಕಾರ್ಮಿಕನನ್ನು ನಂಬಿಸಿ ಕರೆದೊಯ್ದು ನಡುರಸ್ತೆಯಲ್ಲಿ ಕಾರಿನಲ್ಲಿ ಹತ್ಯೆ ಮಾಡಿರುವುದು ತಿಳಿದುಬಂದಿದೆ. ತುಳಸಿ ಪಾಲು ಜತೆಗೆ ತಮ್ಮ ಪಾಲಿಗೆ ಬರಬೇಕಾದ ಆಸ್ತಿಯನ್ನು ಪಡೆಯಲು ಶ್ರೀಧರ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ಇದರಲ್ಲಿ ತುಳಸಿ ಸಹೋದರಿ ರೇವತಿಯದ್ದೂ ಕೈವಾಡವಿದೆ ಎಂದು ತಿಳಿಸಲಾಗಿದೆ. ಪಾರ್ಸೆಲ್‍ನಲ್ಲಿದ್ದ ಶವ ನೋಡಿ ಓಡಿ ಬಂದು ತಮ್ಮ ಮನೆಯಲ್ಲಿ ತುಳಸಿ ಆಶ್ರಯ ಪಡೆಯಬಹುದು ಆಗ ಬೆದರಿಸಿ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಬೇಕು ಎಂದು ಮೊದಲೇ ಪ್ಲ್ಯಾನ್ ಮಾಡಿದ್ದ. ಮೃತದೇಹ ನೋಡಿ ಎಲ್ಲರೂ ಜೋರಾಗಿ ಕೂಗಿಕೊಂಡು ಬಂದು ಪೊಲೀಸರಿಗೆ ಕರೆ ಮಾಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.