ದಕ್ಷಿಣ ಕೊರಿಯಾ ಡೆಡ್ಲಿ ವಿಮಾನ ಅಪಘಾತ, 179 ಮಂದಿ ದುರ್ಮರಣ.

29

ಸಿಯೋಲ್: 179 ಜನರನ್ನು ಬಲಿ ಪಡೆದ ದಕ್ಷಿಣ ಕೊರಿಯಾ ಡೆಡ್ಲಿ ವಿಮಾನ ಅಪಘಾತದಲ್ಲಿ 2 ಬದುಕುಳಿದಿರುವುದೇ ರೋಚಕವಾಗಿದೆ. ಅವರು ಹೇಗೆ ಬದುಕುಳಿದರು ಎಂಬುದಕ್ಕೆ ಕಾರಣ ನೀಡಲಾಗಿದೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಜೆಜು ಏರ್ ವಿಮಾನವು ರನ್‍ವೇಯಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 181 ಮಂದಿಯ ಪೈಕಿ 179 ಮಂದಿಯನ್ನು ಕೊಂದ ಬಳಿಕ ಹೃದಯವಿದ್ರಾವಕವಾದ ದೃಶ್ಯಗಳು ತೆರೆದುಕೊಂಡವು. ದುರಂತದಲ್ಲಿ ಬದುಕುಳಿದಿದ್ದು 2 ಮಂದಿ ಫ್ಲೈಟ್ ಅಟೆಂಡೆಂಟ್‍ಗಳು ಪ್ರಯಾಣಿಕರು ಮಾತ್ರ. ಅವರು ವಿಮಾನದ ಹಿಂಭಾಗದ ಬಾಲ ವಿಭಾಗದಲ್ಲಿ ಕುಳಿತಿದ್ದರಿಂದ ಮಾರಣಾಂತಿಕ ಅಪಘಾತದಿಂದ ಬದುಕುಳಿದಿದ್ದಾರೆ. ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದಕ್ಷಿಣ ಕೊರಿಯಾ ತಂಡ ಮ್ಯಾಗಜೀನ್‍ನ 2015 ರ ಅಧ್ಯಯನವು ಅಪಘಾತಗಳ ಸಂದರ್ಭದಲ್ಲಿ ಹಿಂಭಾಗದ ಆಸನಗಳು ಅತ್ಯಂತ ಸುರಕ್ಷಿತವಾಗಿದೆ ಎಂದು ಕಂಡುಕೊಂಡಿವೆ. ಮಧ್ಯಮ ಮೂರನೇ (ಶೇ.39) ಮತ್ತು ಮುಂಭಾಗಕ್ಕೆ (ಶೇ.38) ಹೋಲಿಸಿದರೆ, ವಿಮಾನದ ಹಿಂಭಾಗದ ಸೀಟುಗಳು ಶೇ.32 ರಷ್ಟು ಸಾವಿನ ಪ್ರಮಾಣವನ್ನು ಹೊಂದಿವೆ ಎಂದು ಮಾಹಿತಿ ಸೂಚಿಸಲಾಗಿದೆ. 2 ಜನ ಬದುಕುಳಿದವರನ್ನು ಲೀ ಮತ್ತು ಕ್ವಾನ್ ಎಂದು ಗುರುತಿಸಲಾಗಿದ್ದು, ಸುಟ್ಟ ವಿಮಾನದ ಬಾಲ ಭಾಗದಿಂದ ಅವರನ್ನು ರಕ್ಷಿಸಲಾಗಿದೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಅವರು ಎಡ ಭುಜ ಮತ್ತು ತಲೆ ಭಾಗಕ್ಕೆ ಪೆಟ್ಟಾಗಿದೆ ಎಂದು ತಿಳಿಸಿದ್ದಾರೆ. ಬೋಯಿಂಗ್ 737-800 ವಿಮಾನವು ಬ್ಯಾಂಕಾಕ್‍ನಿಂದ ಮುವಾನ್‍ಗೆ ಪ್ರಯಾಣ ಬೆಳೆಸಿ, ಬೆಳಿಗ್ಗೆ ಒಂಬತ್ತು ಗಂಟೆಯ ಸಮಯದಲ್ಲಿ ಇಳಿಯಲು ಪ್ರಯತ್ನಿಸಿದಾಗ ಕಾಂಪೌಂಡ್‍ಗೆ ಅಪ್ಪಳಿಸಲಾಗಿದ್ದು, ಪರಿಣಾಮ ಬೆಂಕಿ ಹೊತ್ತಿಕೊಂಡು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.