ಸಿಎಂ ಸಿದ್ದರಾಮಯ್ಯ ಹೆಸರನ್ನೇ ಈ ರಾಜ್ಯಕ್ಕೂ ಇಟ್ಟು ಬಿಡಲಿ: ಹೆಚ್.ಡಿ ಕುಮಾರಸ್ವಾಮಿ.

30

ಮೈಸೂರು: ಇಡೀ ಕರ್ನಾಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಈ ರಾಜ್ಯಕ್ಕೂ ಅವರ ಹೆಸರೆ ಇಟ್ಟು ಬಿಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಕೆಆರ್‍ಎಸ್ ರಸ್ತೆಗೆ ಮುಖ್ಯಮಂತ್ರಿ ಹೆಸರು ಇಡುವ ವಿಚಾರವಾಗಿ ಮಾತನಾಡಿದ ಅವರು, ಮಹಾರಾಜರ ಮನೆತನಕ್ಕೆ ಸರ್ಕಾರ ಯಾಕೆ ಅಪಮಾನ ಮಾಡುತ್ತಿದೆ. ಸಿದ್ದರಾಮಯ್ಯ ಈ ವಿಚಾರದಲ್ಲಿ ಜಾಣ ಮೌನದಲ್ಲಿದ್ದಾರೆ. ತಮ್ಮ ಬೆಂಬಲಿಗರ ಛೂ ಬಿಟ್ಟು ರಸ್ತೆಗೆ ತಮ್ಮ ಹೆಸರಿಡಿಸಿಕೊಳ್ಳುತ್ತಿದ್ದಾರೆ. ಸಿಎಂ ಹೆಸರನ್ನು ದೇವನೂರು ಬಡಾವಣೆಯ ಕೆಸರೆ ಗ್ರಾಮಕ್ಕೆ ಇಡಲಿ. ಇಡೀ ಕರ್ನಾಟಕಕ್ಕೆ ಸಿಎಂ ಅವರು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಈ ರಾಜ್ಯಕ್ಕೂ ಅವರ ಹೆಸರೇ ಇಟ್ಟು ಬಿಡಲಿ. ಈ ಹೆಸರಿನ ರಾಜಕಾರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಬಿಡಬೇಕು ಎಂದು ಹೇಳಿದರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿಗೆ ನನ್ನ ಅವಧಿಯಲ್ಲೂ ಬಹಳ ಕೊಡುಗೆ ಕೊಟ್ಟಿದ್ದೇನೆ. ಹಾಗಂತ ನನ್ನ ಹೆಸರಿಡಿ ಎಂದು ಕೇಳಲು ಆಗುತ್ತಾ ಎಂದು ಪ್ರಶ್ನಿಸಿದರು. ಮೈಸೂರು ಪಾಲಿಕೆ ಆಯುಕ್ತ ಜೆಡಿಎಸ್ ಜೊತೆ ಜಿ.ಟಿ ದೇವೇಗೌಡ ಮುನಿಸು ಬಗ್ಗೆ ಮಾತನಾಡಿ, ಜನತಾದಳಕ್ಕೂ ಜಿಟಿಡಿಗೂ ಗಂಡ-ಹೆಂಡತಿ ಸಂಬಂಧ ಇದ್ದ ರೀತಿ. ಜಗಳ ಮುನಿಸು ನಡೆಯುತ್ತದೆ. ಸಂಬಂಧವೇನೂ ಮುರಿಯುವುದಿಲ್ಲ. ಆಯಾ ಸಂದರ್ಭಕ್ಕೆ ಜಿಟಿಡಿ ಅನ್ನಿಸಿದ್ದನ್ನು ಹೇಳುತ್ತಾರೆ. ಅಷ್ಟಕ್ಕೆ ನಮ್ಮ ಅವರ ಸಂಬಂಧ ಮುಗಿಯಿತು ಅಂತಾ ಅರ್ಥ ಅಲ್ಲ. ಜಿಟಿಡಿ ಯಾವ ಪಕ್ಷಕ್ಕೂ ಹೋಗಲ್ಲ. ನಮ್ಮಲ್ಲೇ ನಮ್ಮ ಜೊತೆಯೇ ಇದ್ದಾರೆ. ನಮ್ಮ ಪಕ್ಷದ 18 ಶಾಸಕರ ಶಕ್ತಿ ಕಾಂಗ್ರೆಸ್‍ಗೆ ಗೊತ್ತಿದೆ. ನಮ್ಮ ಶಾಸಕರ ಒಗ್ಗಟ್ಟು ಮುರಿಯುವ ಯತ್ನ ಆಗಾಗ ಮಾಡುತ್ತಾ ಇರುತ್ತಾರೆ. ಇದರಲ್ಲಿ ಅವರು ಯಶಸ್ವಿ ಆಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.