ರಾಯಚೂರು: ಮಂತ್ರಾಲಯದಲ್ಲಿ ಅಡ್ವಾನ್ಸ್ ರೂಂ ಬುಕ್ ಮಾಡುವ ರಾಯರ ಭಕ್ತರು ಇನ್ನುಮುಂದೆ ಸಾಕಷ್ಟು ಎಚ್ವರಿಕೆ ವಹಿಸಬೇಕಿದೆ. ಯಾಕೆಂದರೆ ರೂಂ ಬುಕ್ಕಿಂಗ್, ಪ್ರಸಾದ, ವಿವಿಧ ಸೇವೆಗಳ ಸೌಲಭ್ಯ ಒದಗಿಸುವ ಹೆಸರಲ್ಲಿ ವಂಚಕರ ಜಾಲ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಂತ್ರಾಲಯ ರಾಯರ ಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಭಕ್ತರು ಜಾಗೃತರಾಗಿರಲು ಸೂಚಿಸಿದೆ. ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದು, ಭಕ್ತರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ರೂಂ ಬುಕ್ಕಿಂಗ್, ಪ್ರಸಾದ, ವಿವಿಧ ಸೇವೆಗಳ ಸೌಲಭ್ಯ ಒದಗಿಸುವ ಹೆಸರಲ್ಲಿ ವಂಚನೆ ನಡೆಯುತ್ತಿದ್ದು, ಫೇಕ್ ಯುಪಿಐ ಐಡಿಗಳ ಮೂಲಕ ಹಣ ಹಾಕಿಸಿಕೊಂಡು ವಂಚಿಸಲಾಗುತ್ತಿದೆ. ವಂಚಕರ ಜಾಲದಿಂದ ಭಕ್ತರು ಹಣ ಕಳೆದುಕೊಳ್ಳುತ್ತಿದ್ದಾರೆ. ವಂಚಕರ ಕರೆ, ಪೋಸ್ಟ್, ಮೆಸೇಜ್ ನಂಬಿ ನಕಲಿ ಯುಪಿಐ ಐಡಿಗಳಿಗೆ ಹಣ ಹಾಕದಂತೆ ರಾಯರ ಮಠ ಎಚ್ಚರಿಕೆ ನೀಡಿದೆ.










