161 ಸರ್ಕಾರಿ ಸೇವೆಗಳು ಇನ್ನುಮುಂದೆ ವಾಟ್ಸಾಪ್‍ನಲ್ಲಿ ಲಭ್ಯ.

31

ಆಂಧ್ರಪ್ರದೇಶ ಸರ್ಕಾರವು ನಾಗರಿಕರ ಹಿತದೃಷ್ಟಿಯಿಂದ 161 ಸರ್ಕಾರಿ ಸೇವೆಗಳನ್ನು ವಾಟ್ಸಾಪ್‍ನಲ್ಲಿ ನೀಡಲು ನಿರ್ಧರಿಸಿದೆ. ಸಾರ್ವಜನಿಕರು ಪದೇ ಪದೇ ಕಚೇರಿಗೆ ಅಲೆಯುವುದು ತಪ್ಪಲಿದೆ. ಜನರು ಈಗ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ 161 ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರವು 161 ಸೇವೆಗಳನ್ನು ಒದಗಿಸಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಇಂಧನ, ಎಪಿಎಸ್‍ಆರ್‍ಟಿಸಿ, ಕಂದಾಯ, ಸಿಎಂ ಪರಿಹಾರ ನಿಧಿ, ಮುನ್ಸಿಪಲ್ ಕಾರ್ಪೊರೇಷನ್‌ಗೆ ಸಂಬಂಧಿಸಿದ ಸೇವೆಗಳನ್ನು ಮೊದಲ ಹಂತದಲ್ಲಿ ಒದಗಿಸಲಾಗುತ್ತದೆ. 2ನೇ ಹಂತದಲ್ಲಿ ಹೆಚ್ಚಿನ ಸೇವೆಗಳನ್ನು ಒದಗಿಸುವ ನಿರೀಕ್ಷೆ ಇದೆ. ಸಾಮಾನ್ಯ ಜನರ ಡೇಟಾ ಅಪರಾಧಿಗಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರೊಂದಿಗೆ ಫೋರೆನ್ಸಿಕ್ಸ್ ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸುವಂತೆಯೂ ಮನವಿ ಮಾಡಲಾಗಿತ್ತು. ಕಳೆದ ವರ್ಷ ಅ.22 ರಂದು, ಆಂಧ್ರಪ್ರದೇಶವು ವಾಟ್ಸಾಪ್ ಮೂಲಕ ಸೇವೆಗಳನ್ನು ವಿಸ್ತರಿಸಲು ಮೆಟಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ವಾಟ್ಸಾಪ್‍ನಲ್ಲಿ ವಾಯು ಮಾಲಿನ್ಯದ ಬಗ್ಗೆ ದೂರು ನೀಡಬಹುದು. ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಸರ್ಕಾರ ಜಾರಿಗೊಳಿಸುವ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅರ್ಹತೆ ಮತ್ತು ಪ್ರಯೋಜನಗಳ ಕುರಿತು ತಿಳಿಯಬಹುದಾಗಿದೆ.