ಕಳಸ  : ಜೀಪ್ ಸಮೇತ ಭದ್ರಾ ನದಿಗೆ ಬಿದ್ದು ಸಾವನ್ನಪ್ಪಿದ್ದ ಯುವಕ ಶಮಂತ್ ಮೃತದೇಹ ಪತ್ತೆ.

38
 ಕಳಸ  : ಜೀಪ್ ಸಮೇತ ಭದ್ರಾ ನದಿಗೆ ಬಿದ್ದು ಸಾವನ್ನಪ್ಪಿದ್ದ ಯುವಕ ಶಮಂತ್ ಮೃತದೇಹ ಐದು ದಿನಗಳ ಬಳಿಕ ಪತ್ತೆಯಾಗಿದೆ. ಕಳೆದ ಗುರುವಾರ ಬಾಡಿಗೆ ಮುಗಿಸಿಕೊಂಡು ಕೂಲಿ‌ ಕಾರ್ಮಿಕರನ್ನ ಕರೆದೊಯ್ಯಲು ಹೋಗುವಾಗ ರಸ್ತೆಯ ಡೌನ್ ನಲ್ಲಿ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದು ಭದ್ರಾ ನದಿಗೆ ಉರುಳಿತ್ತು. ಮರುದಿನವೇ ಪಿಕಪ್ ಪತ್ತೆಯಾಗಿತ್ತು. ಆದರೆ, ಚಾಲಕ ಶಮಂತ್ ಮೃತದೇಹ ಪತ್ತೆಯಾಗಿರಲಿಲ್ಲ. ಕಳೆದ ಐದು ದಿನಗಳಿಂದ ಎನ್.ಡಿ.ಆರ್.ಎಫ್. ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು, ನುರಿತ ಈಜು ತಜ್ಞರು  ಹಾಗೂ ಸ್ಥಳಿಯರು ಹುಡುಕಾಟ ನಡೆಸುತ್ತಿದ್ದರು. ಆದರೆ, ಇಂದು ಭದ್ರಾ ನದಿಯಿಂದ ಸುಮಾರು 2 ಕಿ.ಮೀ.‌ದೂರದ ಗಿಡಘಂಟೆಗಳ ಮಧ್ಯೆ ಮೃತದೇಹ ಪತ್ತೆಯಾಗಿದೆ. ಪಿಕಪ್ ಭದ್ರಾ ನದಿಗೆ ಬಿದ್ದು ಮಗ ಸಾವನ್ನಪ್ಪಿದ ವಿಷಯ ತಿಳಿದು ತಾಯಿ ರವಿಕಲಾ ಕೂಡ ಮನೆ ಹಿಂದಿನ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಒಂದೇ ದಿನ ಒಂದೇ ಮನೆಯಲ್ಲಿ ಇಬ್ಬರು ಸಾವನ್ನಪ್ಪಿದರು. ಐದು ದಿನಗಳಿಂದ ಶಂಮತ್ ಮೃತದೇಹಕ್ಕಾಗಿ ನಿರಂತರವಾಗಿ ಹುಡುಕಾಟ ನಡೆಯುತ್ತಿತ್ತು. ಇಂದು 25 ವರ್ಷದ ಯುವಕ ಶಮಂತ್ ಮೃತದೇಹ ಪತ್ತೆಯಾಗಿದೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.