ಮೂಡಿಗೆರೆ  ಶ್ರೀಗಂಧದ ಮರವನ್ನು ಅಕ್ರಮವಾಗಿ  ಕಡಿದು ಸಾಗಿಸುತ್ತಿದ್ದ   ಮನ್ಸೂರ್ ಬಂಧನ.

60
ಮೂಡಿಗೆರೆ: ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ  
 ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ  ಅರಣ್ಯ ಇಲಾಖೆ ಅಧಿಕಾರಿಗಳು  ನಡೆಸಿದ  ಕಾರ್ಯಚರಣೆಯಲ್ಲಿ  ಬೈಕು ಸೇರಿದಂತೆ  ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರಪಿಗಳಾದ ಯೂಸುಫ್ ಹಾಗೂ ಹಂಡುಗೂಳಿ ಮೂಲದ   ಮನ್ಸೂರ್ ಎಂಬಾತನನ್ನು ಬಂಧಿಸಲಾಗಿದ್ದು. 
 ಮನ್ಸೂರ್ ಮೇಲೆ ಹಲವು ಪ್ರಕರಣಗಳಿದ್ದು  ಈ ಹಿಂದೆ ಬಾಳೆಹೊನ್ನೂರು  ಅರಣ್ಯ ಪ್ರದೇಶದಲ್ಲಿ ಮರ ಕಳ್ಳತನ  ಮಾಡಿದ ಆರೋಪವಿದ್ದು. ಹಾಸನ ಮೂಲದ ಪ್ರತಿನಿಧಿ ಪತ್ರಿಕೆಯ ವರದಿಗಾರ  ಎಂದು ಸುಳ್ಳು ಹೇಳಿಕೊಂಡು  ಅಧಿಕಾರಿಗಳನ್ನು ಹೆದರಿಸುತ್ತಿದ್ದ ಎನ್ನಲಾಗಿದೆ.
 ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿ  ತನಿಖೆ ನಡೆಸುತ್ತಿದ್ದಾರೆ.