ಚಿಕ್ಕಮಗಳೂರಿನಲ್ಲಿ ಮೋದಿ ಟೀ, ಮೋದಿ ಬಜ್ಜಿ, ಎಂದು ಘೋಷಣೆ ಕೂಗಿ ಪ್ರತಿಭಟನೆ…

617

ಚಿಕ್ಕಮಗಳೂರು: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕರೆ ನೀಡಿರೋ ಭಾರತ್ ಬಂದ್ಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬೆಳಗ್ಗಿನಿಂದಲೂ ಕೆ.ಎಸ್.ಆರ್.ಟಿ.ಸಿ, ಖಾಸಗಿ ಬಸ್ ಸಂಪೂರ್ಣ ಸ್ಥಗಿತಗೊಂಡಿದ್ದು, ಆಟೋ ಸಂಚಾರ ಕೂಡ ಸಂಪೂರ್ಣ ಸ್ಥಗಿತಗೊಂಡಿದ್ದು, ನಗರದಾದ್ಯಂತ ಅಲ್ಲಲ್ಲೇ ಕೆಲವೊಂದು ಅಂಗಡಿ-ಮುಂಗಟ್ಟುಗಳು ಬಾಗಿಲು ತೆರೆದಿದ್ದು, ಕನ್ನಡ ಪರ ಸಂಘಟನೆ ಕಾರ್ಯಕರ್ತರು ಬಾಗಿಲು ಮುಚ್ಚಿಸಿದ್ದಾರೆ. ನಗರದಲ್ಲಿ ಅಲ್ಲಲ್ಲೇ ಕೆಲ ಆಟೋಗಳು ಕೂಡ ಬೀದಿಗಿಳಿದಿದ್ದು ಅವುಗಳನ್ನೂ ನಿಲ್ಲಿಸುವಂತೆ ಸಂಘಟನಾ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಆಟೋ, ಸರ್ಕಾರಿ ಬಸ್ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿರೋದ್ರಿಂದ ಬೇರೆ-ಬೇರೆ ಊರುಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಕೂಡ ಸಂಕಷ್ಟ ಅನುಭವಿಸಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ತೈಲ ಬೆಲೆ ಇಳಿಕೆಯಾಗಿದ್ರು, ಕೇಂದ್ರ ಸರ್ಕಾರ ಬೆಲೆಯನ್ನ ಇಳಿಕೆ ಮಾಡದೆ ಮತ್ತಷ್ಟು ಹೆಚ್ಚಿಸ್ತಿರೋದ್ರಿಂದ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದು, ನಗರದ ಹನುಮಂತಪ್ಪ ವೃತ್ತದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಟೀ, ಬೋಂಡ ಮಾಡಿ ಮಾರುವ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.