ಭಾರತ್‌‌ ಬಂದ್‌ಗೆ ಬಲಿಯಾದ 2 ವರ್ಷದ ಮಗು…

312
firstsuddi

ಬಿಹಾರ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕರೆ ನೀಡಿರೋ ಭಾರತ್ ಬಂದ್ ಹಿನ್ನಲೆ ಸರಿಯಾದ ಸಮಯಕ್ಕೆ  ಆ್ಯಂಬುಲೆನ್ಸ್ ಸಿಗದೆ ಮಗುವೊಂದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದ್ದು,ಜಹನಾಬಾದ್‍ನಲ್ಲಿ ಪುಟ್ಟ ಮಗುವೊಂದು ತೀವ್ರ ಅನಾರೋಗ್ಯಕ್ಕೆ ಒಳಗಾಗಿತ್ತು. ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೆ ಭಾರತ್ ಬಂದ್ ಹಿನ್ನಲೆ ಸಕಾಲದಲ್ಲಿ ಆ್ಯಂಬುಲೆನ್ಸ್ ಬರಲಿಲ್ಲ. ಇದರಿಂದ ಮಗುವಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಮೃತಪಟ್ಟಿದೆ.