ದೇಶದ ಜನರು ಕೇಂದ್ರ ಸರ್ಕಾರದ ವಿರುದ್ದ ಬಹುದಿನದ ಆಕ್ರೋಶವನ್ನು ಇಂದು ಹೊರಹಾಕಿದ್ದಾರೆ.- ಎಸ್.ಎಲ್.ಧರ್ಮೆಗೌಡ…

629
firstsuddi

ಚಿಕ್ಕಮಗಳೂರು:ದೇಶದ ಶ್ರೀ ಸಾಮಾನ್ಯರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವ ಪೆಟ್ರೋಲ್,ಡೀಸಲ್ ಹಾಗೂ ಅಡುಗೆ ಅನಿಲ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆ ತಡೆ ಯುವಲ್ಲಿ ಹಾಗೂ ರೂಪಾಯಿ ಮೌಲ್ಯ ಗಣನೀಯವಾಗಿ ಅದೋಗತಿಗೆ ಹೋಗುತ್ತಿರುವು ದನ್ನು ನಿಯಂತ್ರಿಸುವಲ್ಲಿ ವಿಫಲ ವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಇಂದು ದೇಶದಾದ್ಯಂತ ಏರ್ಪಡಿಸಲಾಗಿದ್ದ ಭಾರತ್ ಬಂದ್ ಚಿಕ್ಕಮಗಳೂರು ಜಿಲ್ಲೆ ಯಲ್ಲೂ ಯಶಸ್ವಿಗೊಳಿಸಿರುವ ಜನತೆಯನ್ನು ವಿಧಾನಪರಿಷತ್ ಸದಸ್ಯ ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಧರ್ಮೆಗೌಡ ರವರು ಅಭಿನಂದಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯವನ್ನು ತಿಳಿಸಿರುವ ಅವರು ದೇಶದ ಜನರು ಇಂದು ತಮ್ಮ ಬಹುದಿನದ ಆಕ್ರೋಶವನ್ನು ಹೊರಹಾಕಿದ್ದಾರೆಂದು ತಿಳಿಸಿ ದ್ದಾರೆ.ದೇಶದ ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಗುಜರಾತ್ ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ., ರುಪಾಯಿ ಮೌಲ್ಯ ಕುಸಿಯುತ್ತಿದೆ, ಕೂಡಲೇ ಪ್ರಧಾನಿಯವರು ತೈಲ ಬೆಲೆಯನ್ನು ಇಳಿಸ ಬೇಕೆಂದು ಒತ್ತಾಯಿಸಿದ್ದರು.
ಇದೇ ಸಂದರ್ಭದಲ್ಲಿ ಭುಗಿಲೆದ್ದ ಜನಾಕ್ರೋಶವನ್ನು ರಾಜಕೀಯವಾಗಿ ಬಳಸಿಕೊಳ್ಳು ವಲ್ಲಿ ನರೇಂದ್ರ ಮೋದಿಯವರು ಯಶಸ್ವಿಯಾಗಿ ದೇಶದ ಜನರಿಗೆ `ಅಚ್ಛೇದಿನ್’ ಬರುತ್ತೆ ಎಂದು ಭರವಸೆ ನೀಡಿದ್ದರು.ಮೋದಿಯವರು ಪ್ರಧಾನಿ ಯಾದ ನಂತರ ಅಚ್ಛೇ ದಿನ್ ಬರುವಿಕೆಗಾಗಿ ದೇಶದ ಜನರು ಕಾದುಕುಳಿತರು ಬಿಟ್ಟರೆ ಇಂಧನ ಬೆಲೆ ಏರಿಕೆ,ರೂಪಾಯಿ ಮೌಲ್ಯ ಕುಸಿತ ಹಾಗೂ ಸಾಮಾನ್ಯ ಜನರು ಬಳಸುವ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಮೋದಿಯ ವರು ವಿಫಲರದರು. ಆದರೆ,ಈಗ ಭಾರತದ ಅಕ್ಕಪಕ್ಕದ ದೇಶಗಳಾದ ಭೂತಾನ್, ಪಾಕಿಸ್ತಾನ,ಬಾಂಗ್ಲಾದೇಶ, ನೇಪಾಳಗಳಲ್ಲಿ ಇಂಧನ ಬೆಲೆ ಭಾರತಕ್ಕಿಂತ ತುಂಬಾ ಕಡಿಮೆ ಇದೆ.ನಮ್ಮ ದೇಶದಲ್ಲಿ ಶೇ. 40ರಷ್ಟು ಇಂಧನವನ್ನು ಬಡವರು, ಮದ್ಯಮ ವರ್ಗದವರು ಹಾಗೂ ರೈತರು ಬಳಸುತ್ತಿದ್ದಾರೆ. ಗಣನೀಯವಾದ ಬೆಲೆ ಏರಿಕೆ ಯಿಂದ ರೈತರು,ಸಾಮಾನ್ಯ ಜನರು,ಮೀನುಗಾರರು, ಬಡವರು ಸೇರಿದಂತೆ ದೇಶದ ಶ್ರೀ ಸಾಮಾನ್ಯರು ತತ್ತರಿಸಿಹೋ ಗಿದ್ದಾರೆ.
ಭೂತಾನ್ ಮತ್ತು ನೇಪಾಳದ ಗಡಿಭಾಗದಲ್ಲಿರುವ ಭಾರತೀಯರು ಆ ದೇಶದಿಂದ ಇಂಧನ ಖರೀದಿಸಿಕೊಳ್ಳು ತ್ತಿದ್ದಾರೆ.
ಅಡಿಗೆ ಅನಿಲದ ಬೆಲೆ ಗಗನಕ್ಕೇರಿದ್ದು ಶ್ರೀ ಸಾಮಾನ್ಯರ ಬದುಕು ಅಲ್ಲೋಲಕಲ್ಲೋಲ ವಾಗಿದೆ. ಇಷ್ಟೆಲ್ಲಾ ಆಗಿ ರೂ ಪಾಯಿ ಬೆಲೆ ಸಂಪೂರ್ಣ ಕುಸಿತ ಕಂಡರೂ ದೇಶಪ್ರೇಮದ ಪ್ರಚಾರ ಕರಾದ ಮಾನ್ಯ ಬಿ.ಜೆ.ಪಿ ಮುಖಂಡರುಗಳು ಏನು ಮಾಡುತ್ತಿದ್ದಾರೆ? ಅವರು ತಮ್ಮ ಪ್ರಧಾನಿಯವರಿಗೆ ಜನರ ಸಂಕಷ್ಟದ ಬಗ್ಗೆ ಮನವರಿಕೆ ಮಾಡಿ ಕೊಡಲಿ ಎಂದು ಧರ್ಮೇಗೌಡರವರು ತಿಳಿಸಿದ್ದಾರೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ನಾವೇ ಎಲ್ಲಾ ಬಲ್ಲವರು ಎಂದು ಬೀಗುವ ಬಿ.ಜೆ.ಪಿಯವರು ಬೆಲೆ ಏರಿಕೆಯ ಬಗ್ಗೆ ತಪ್ಪಿಸಿಕೊಳ್ಳುವ ಮಾತುಗಳನ್ನಾಡುತ್ತಿರುವುದು ಖಂಡನೀಯವಾಗಿದೆ. ದೇಶದ ಶ್ರೀಸಾಮಾನ್ಯರ ಬಗ್ಗೆ ಬಿ.ಜೆ.ಪಿ ಯವರಿಗಿರುವ ಕಾಳಜಿಗೆ ಈಗಿನ ಬೆಲೆ ಏರಿಕೆಯೇ ಹಿಡಿದ ಕನ್ನಡಿಯಾಗಿದೆ ಎಂದು ಧರ್ಮೇಗೌಡರವರು ಲೇವಡಿ ಮಾಡಿ ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್,ಡೀಸಲ್ ಹಾಗೂ ಅಡುಗೆ ಅನಿಲ ಬೆಲೆಯನ್ನು ಇಳಿಸ ಬೇಕೆಂದು ಆಗ್ರಹಿಸಿದ್ದಾರೆ.