ನಾನು ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ.- ರಮೇಶ್ ಜಾರಕಿಹೊಳಿ…

493
firstsuddi

ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ನಾನು ರಾಜೀನಾಮೆ ನೀಡುವುದಿಲ್ಲ,ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಪಿಎಲ್ ಡಿ ಬ್ಯಾಂಕ್ ವಿಚಾರದಲ್ಲೂ ನನಗೆ ಹಿನ್ನಡೆಯಾಗಿಲ್ಲ, ಮುಖಭಂಗವೂ ಆಗಿಲ್ಲ. ಹಾಗಾಗಿದ್ದರೆ ಅಂದೇ ರಾಜೀನಾಮೆ ನೀಡುತ್ತಿದ್ದೆ. ಮಲ್ಲಿಕಾರ್ಜುನ್ ಖರ್ಗೆಯವರ ಭೇಟಿಗೆ ತೆರಳುತ್ತಿದ್ದೇನೆ. ಅವರು ಹಿರಿಯರು, ನನಗೆ ತಂದೆ ಸಮಾನ. ಅವರು ಏನು ಹೇಳುತ್ತಾರೋ ಹಾಗೇ ನಡೆದುಕೊಳ್ಳುತ್ತೇವೆ. ಎಲ್ಲ ವಿಚಾರಗಳನ್ನೂ ಅವರ ಬಳಿ ಚರ್ಚಿಸುತ್ತೇವೆ ಎಂದಿದ್ದಾರೆ.