19 ದಿನಗಳ ನಂತರ ಉಪವಾಸ ಸತ್ಯಾಗ್ರಹ ಕೈಬಿಟ್ಟ ಹಾರ್ದಿಕ್ ಪಟೇಲ್…

255
firstsuddi

ಅಹಮದಾಬಾದ್: ಕಳೆದ 19 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಹಾರ್ದಿಕ್ ಪಟೇಲ್ ಬುಧವಾರ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಬೇಕು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಆಗಸ್ಟ್ 25ರಿಂದ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದರು. ಸರಕಾರದಿಂದ ಸ್ಪಂದನೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಯಾವುದೇ ರೀತಿ ಪ್ರತಿಕ್ರಿಯೆ ಸಿಗಲಿಲ್ಲ. ನೀರನ್ನು ಕೂಡ ಸೇವಿಸುವುದನ್ನು ನಿಲ್ಲಿಸಿದ ಅವರು ಆಪ್ತರ ಒತ್ತಾಯದಿಂದ ಬುಧವಾರ ಮಧ್ಯಾಹ್ನ  19 ದಿನಗಳ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.ನಂತರ ಟ್ವೀಟ್ ಮಾಡಿದ ಅವರು, ನನ್ನನ್ನು ಪ್ರೀತಿಸುವವರ ಸಲುವಾಗಿ, ಜೀವಂತ ಇರಲು ಬಯಸುವವರಿಗಾಗಿ ಸಾಯಲು ಕೂಡ ಸಿದ್ಧ. ಆದರೆ ನನ್ನ ಗೆಳೆಯರ ಸಲುವಾಗಿ ಬದುಕುತ್ತೇನೆ ಹೊರತು ನನ್ನನ್ನು ಕೊಲ್ಲಲು ಬಯಸುವವರ ಪ್ರಯತ್ನ ಸಫಲ ಆಗುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.