ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಆಡಳಿತಕ್ಕೆ ಬಂದರೂ ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ.- ಎಚ್​.ಡಿ.ರೇವಣ್ಣ…

860
firstsuddi

ಬೆಂಗಳೂರು: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್​.ಡಿ.ರೇವಣ್ಣ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಆಡಳಿತಕ್ಕೆ ಬಂದರೂ ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ. ರಾಜ್ಯಪಾಲರ ಆಡಳಿತ ಬರಬಹುದು ಎಂದೂ ನನ್ನ ಬಳಿ ಮಾತನಾಡಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ.ಸಮ್ಮಿಶ್ರ ಸರ್ಕಾರ ಪೂರ್ಣಾವಧಿ ಪೂರೈಸುತ್ತದೆ. ಸಿದ್ದರಾಮಯ್ಯನವರ ಜೊತೆ ನಾವೆಲ್ಲ ಚೆನ್ನಾಗಿ ಇದ್ದೇವೆ. ಅರ್ಧಕ್ಕೆ ನಿಂತ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುವುದು, ಹೊಸ ಕಾಮಗಾರಿಗಳ ಜಾರಿಗೆ ರಾಜ್ಯದ ಎಲ್ಲ ಶಾಸಕರ ಸಲಹೆ ಪಡೆಯಲಾಗಿದೆ. ಶಾಸಕರ ಸಲಹೆ ಮೇರೆಗೆ ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.