ಜಾರ್ಖಂಡ್: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಕಾರ್ಯಕರ್ತನೋರ್ವ ಸಂಸದರೊಬ್ಬರ ಕಾಲು ತೊಳೆದು ಆ ನೀರನ್ನು ಕುಡಿದಂತಹ ಘಟನೆ ಜಾರ್ಖಂಡ್ ರಾಜ್ಯದಲ್ಲಿ ನಡೆದಿದೆ.ಜಾರ್ಖಂಡ್ನ ಗೊಡ್ಡಾ ಲೋಕಸಭಾ ಕ್ಷೇತ್ರದಲ್ಲಿ ಘಟನೆ ನಡೆದಿದ್ದು, ಇಲ್ಲಿನ ಸಂಸದ ನಿಶಿಕಾಂತ್ ದುಬೆ ಅವರ ಕಾಲು ತೊಳೆದ ಕಾರ್ಯಕರ್ತನೋರ್ವ ಬಳಿಕ ಆ ನೀರನ್ನು ಕುಡಿದಿದ್ದಾನೆ. ಆದರೆ ಇದನ್ನು ವಿರೋಧಿಸಬೇಕಾಗಿದ್ದ ಸಂಸದ ನಿಶಿಕಾಂತ್ ದುಬೆ ಈ ಘಟನೆಯ ಫೋಟೋಗಳನ್ನು ತಮ್ಮ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ. ಈಗ ಅದು ವೈರಲ್ ಆಗಿದ್ದು, ಈ ಘಟನೆ ಸಾಕಷ್ಟು ವಿಮರ್ಶಾತ್ಮಕ ಟೀಕೆಗೆ ಗುರಿಯಾಗಿದೆ.










