ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.-ಸತೀಶ್​ ಜಾರಕಿಹೊಳಿ…

309
firstsuddi

ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್​ ಜಾರಕಿಹೊಳಿ ಅವರು ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನಾನು ಈಗಾಗಲೇ ನಾಯಕನಾಗಿ ಬೆಳೆದಿದ್ದೇನೆ. ಸಚಿವನಾಗಿಯೇ ಕೆಲಸ ಮಾಡಬೇಕು ಎಂಬುದು ತಪ್ಪು ಕಲ್ಪನೆ .ಸಚಿವ ಸ್ಥಾನ ಹೋದ ಮೂರೇ ತಿಂಗಳಲ್ಲಿ ಗುಂಡ್ಲುಪೇಟೆ ಚುನಾವಣೆಯಲ್ಲಿ ಕೆಲಸ ಮಾಡಿ ನನ್ನ ಶಕ್ತಿಯನ್ನು ತೋರಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ನನ್ನ ಸಾಮರ್ಥ್ಯವನ್ನು ತೋರಿಸಿದ್ದೆ. ಅವಶ್ಯಕತೆ ಇದ್ದಾಗಲೆಲ್ಲ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂದು ಸತೀಶ್​ ಜಾರಕಿಹೊಳಿ ​ತಿಳಿಸಿದ್ದಾರೆ.