ಚಿಕ್ಕಮಗಳೂರು :ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಹಾಸನದಲ್ಲಿ ನಡೆಯುವ ಶಾಸಕಾಂಗ ಸಭೆಗೆ ಯಾವುದೇ ವಿಶೇಷತೆ ಇಲ್ಲ.ಸಂಜೆ ಹಾಸನದಲ್ಲಿ ವಾಸ್ತವ್ಯ ಹೂಡುತ್ತೇನೆ.ನಾಳೆ ಸಂಜೆ ನಾನು ಸಹ ಹಾಸನದಲ್ಲಿ ಶಾಸಕಾಂಗ ಸಭೆಯಲ್ಲಿ ಭಾಗಿಯಾಗುತ್ತೇನೆ. ಎಲ್ಲಾ ಶಾಸಕರಿಗೂ ಆಹ್ವಾನ ನೀಡಲಾಗಿದೆ. ಬಾಂಬೆಗೆ ಹೋಗಿದ್ದಾರೆ ಎನ್ನುವವರು ಸಹ ಸಭೆಯಲ್ಲಿ ಭಾಗಿಯಾಗುತ್ತಾರೆ.ದಂಗೆ ಹೇಳಿಕೆಗೆ ನನ್ನ ವಿರುದ್ಧ ರಾಜ್ಯ ಪಾಲರಿಗೆ ದೂರು ನೀಡಿರುವುದು ಸಂತೋಷ . ರಾಜ್ಯಪಾಲರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇನೆ. ನನ್ನ ದಂಗೆ ಹೇಳಿಕೆಯ ಅರ್ಥ ಪ್ರತಿಭಟನೆ ಎಂದು, ಯಡಿಯೂರಪ್ಪನವರ ಹಾಗೆ ಬೆಂಕಿ ಹಚ್ಚಿಸುವ ಹೇಳಿಕೆ ನೀಡಿಲ್ಲ. ಅವರು ಬೆಂಕಿ ಹಚ್ಚುವ ಹೇಳಿಕೆ ನೀಡಿದ್ರೆ ಅದು ಪ್ರಜಾಪ್ರಭುತ್ವ. ನಾನು ಹೇಳಿದ್ರೆ ಅದು ಪ್ರಜಾಪ್ರಭುತ್ವ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .










