ಬಿಜೆಪಿ ನನಗೆ 30 ಕೋಟಿ ಆಫರ್ ನೀಡಿತ್ತು.- ಲಕ್ಷ್ಮಿ ಹೆಬ್ಬಾಳ್ಕರ್…

294
firstsuddi

ಬೆಳಗಾವಿ: ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಮ್ಮಿಶ್ರ ಸರ್ಕಾರದ ಅಸ್ಥಿರಕ್ಕೆ ಬಿಜೆಪಿಯಿಂದ ಪ್ರಯತ್ನ ನಡೆದಿದೆ.ನನಗೆ 30 ಕೋಟಿ ರೂ. ಹಣ ಮತ್ತು ಸಚಿವ ಸ್ಥಾನ ನೀಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ಆಪರೇಷನ್‌ ಕಮಲ ನಿಸರ್ಗಕ್ಕೆ ವಿರುದ್ಧವಾದದ್ದು,ಈ ವಿಚಾರವನ್ನು ಪಕ್ಷದ ನಾಯಕರ ಗಮನಕ್ಕೆ ತರಲಾಗಿತ್ತು, ನಾನು ಬಿಜೆಪಿಯ ಆಮಿಷಕ್ಕೆ ಬಗ್ಗಲಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.