ಖ್ಯಾತ ಸಂಗೀತಗಾರ ಬಾಲಭಾಸ್ಕರ್ ವಿಧಿವಶ…

356
firstsuddi

ತಿರುವನಂತಪುರ : ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಸಂಗೀತಗಾರ ಬಾಲಭಾಸ್ಕರ್ ಅವರು ಸೋಮವಾರ ತಡರಾತ್ರಿ ನಿಧನರಾಗಿದ್ದಾರೆ. ಸೆಪ್ಟೆಂಬರ್ 25ರಂದು ಮುಂಜಾನೆ ತ್ರಿಶೂರ್ ನಿಂದ ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ ಪಲ್ಲಿಪುರಂ ಬಳಿ ಕಾರು ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ತನ್ನ 2 ವರ್ಷದ ಮಗಳು ತೇಜಸ್ವಿನಿಯನ್ನು ಕಳೆದುಕೊಂಡರು, ಗಂಭೀರವಾಗಿ ಗಾಯಗೊಂಡಿದ್ದ ಭಾಸ್ಕರ್, ಅವರ ಪತ್ನಿ, ಹಾಗೂ ಕಾರು ಚಾಲಕ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಕಳೆದ ಒಂದು ವಾರದಿಂದ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೇ ಭಾಸ್ಕರ್ ತಡರಾತ್ರಿ ನಿಧನರಾಗಿದ್ದಾರೆ. ಭಾಸ್ಕರ್ ಅವರ ಪತ್ನಿಗೆ ಹಾಗೂ ಕಾರು ಚಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.