ಒಂದು ಕಾಲು, ಬಾಲ ಇರುವ ವಿಚಿತ್ರ ಮಗು ಜನನ…

993
firstsuddi

ಕೊಡಗು: ಒಂದೇ ಕಾಲು ಹಾಗೂ ಬಾಲ ಇರುವ ಮಗು ಜನಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ನಡೆದಿದೆ. ಶನಿವಾರಸಂತೆಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಭುವನಳ್ಳಿ ಗ್ರಾಮದ ಚಿನ್ನಮ್ಮ ಎಂಬುವವರಿಗೆ ಒಂದು ಕಾಲು ಮತ್ತು ಬಾಲ ಇರುವ ಮಗು ಜನಿಸಿದ್ದು,ಜನಿಸಿದ ಕೆಲ ಹೊತ್ತಿನಲ್ಲೇ ಮಗು ಮೃತಪಟ್ಟಿದೆ. ಜನನಾಂಗ ಇಲ್ಲದ ಕಾರಣ ಮಗು ಗಂಡೋ, ಹೆಣ್ಣೋ ಎಂದು ಗುರುತಿಸಲು ಸಾಧ್ಯವಾಗಿಲ್ಲ.