ಬೆಂಗಳೂರು :ಡಿಂಪಲ್ ಕ್ವೀನ್ ಎಂದೇ ಸ್ಯಾಂಡಲ್ವುಡ್ ನಲ್ಲಿ ಫೇಮಸ್ ಆಗಿರುವ ರಚಿತಾ ರಾಮ್ ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ರಚಿತಾ ರಾಮ್ ಇಂದು 26ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ಮುಂದೆ ಬೀಡುವಿಲ್ಲದೇ ಸ್ಟಾರ್ ನಟರ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ರಚಿತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಐದು ವರ್ಷ ತುಂಬಿದೆ.ರಚಿತಾ ರಾಮ್ ಅಯೋಗ್ಯ ಚಿತ್ರದ ಸಕ್ಸಸ್ ನ ಖುಷಿಯಲ್ಲಿದ್ದು, ಅವರ ಅಭಿನಯದ ನಟಸಾರ್ವಭೌಮ, ಐ ಲವ್ ಯೂ ಹಾಗೂ ಸೀತಾರಾಮ್ ಕಲ್ಯಾಣ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.










