ಚಿಕ್ಕಮಗಳೂರು: ಪೊಲೀಸ್ ಪೇದೆಗಳು ಮಾಂಗಲ್ಯ ಸರ ವಾಪಾಸ್ ನೀಡಿ ಮಾನವೀಯತೆ ಮೆರೆದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರ ದಲ್ಲಿ ನಡೆದಿದೆ. ಅಜ್ಜಂಪುರದ ಪ್ರಿಯಾಂಕ ಎಂಬುವರು ಬಸ್ ನಿಲ್ದಾಣದಲ್ಲಿ ಒಂದು ಲಕ್ಷ ಬೆಲೆಬಾಳುವ ಮಾಂಗಲ್ಯ ಸರ ಕಳೆದುಕೊಂಡಿದ್ದು, ನಾಲ್ಕು ದಿನದ ಹಿಂದೆ ಗಸ್ತು ತಿರುಗುತ್ತಿದ್ದ ವೇಳೆ ಸಂತೋಷ್.ವೈ ಹಾಗೂ ಸಂತೋಷ್.ಡಿ.ಜಿ ಪೊಲೀಸ್ ಪೇದೆಗಳಿಗೆ ಆ ಮಾಂಗಲ್ಯ ಸರ ಸಿಕ್ಕಿದ್ದು, ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕ ಅವರಿಗೆ ಮಾಂಗಲ್ಯ ಸರ ವಾಪಾಸ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಪೊಲೀಸ್ ಪೇದೆಗಳ ಮಾನವೀಯತೆಗೆ ಹರ್ಷ ವ್ಯಕ್ತಪಡಿಸಿದ ಪ್ರಿಯಾಂಕ ಸರ ಸಿಕ್ಕ ಖುಷಿಗೆ ಪ್ರಿಯಾಂಕ ಕುಟುಂಬಸ್ಥರು ಪೊಲೀಸ್ ಪೇದೆಗಳಿಗೆ 5000 ನಗದು ಬಹುಮಾನ ನೀಡಿದ್ದಾರೆ










