ಚಿಕ್ಕಮಗಳೂರು: ನೀವು ವಿಭಿನ್ನ ಕಾರುಗಳಲ್ಲಿ ಸಾವಿರಾರು ಕಿ.ಮೀ ಡ್ರೈವ್ ಮಾಡಿರಬಹುದು,ದುಬಾರಿಕಾರುಗಳಲ್ಲಿ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಗಳಲ್ಲಿಯೂ ಪ್ರಯಾಣ ಮಾಡಿರಬಹುದು, ಆದರೆ ಜಿಪ್ಸಿಯಲ್ಲಿ ರೈಡ್ ಮಾಡುವುದು ಇದೆಲ್ಲದ್ದಕ್ಕೂ ಭಿನ್ನ, ಅದರಲ್ಲೂ ವಾಟರ್ ಸ್ಟ್ರೀಮ್ ಗಳಲ್ಲಿ, ಆಫ್ ರೋಡ್ ಗಳಲ್ಲಿ ಹಾಗೂ ತೋಟದ ಮಧ್ಯೆ ಇರುವ ಸಣ್ಣ ಮಡ್ ರಸ್ತೆಗಳಲ್ಲಿ ಡ್ರೈವ್ ಮಾಡೋದು ಅಂದ್ರೆ ಅದರ ಮಜಾನೆ ಬೇರೆ. ಅಂತಹ ವಿಭಿನ್ನ ರೀತಿಯ ಜಿಪ್ಸಿ ರೈಡ್ ಇಂದು ಚಿಕ್ಕಮಗಳೂರಿನ ಕೊಪ್ಪ ದಲ್ಲಿ ನಡೆದಿದೆ.
ವಾಟರ್ ಸ್ಟ್ರಿಮ್ ನಲ್ಲಿ ಜಿಪ್ಸಿ ಡ್ರೈವ್ ಮಾಡ್ತಿರೋ ಜಿಪ್ಸಿ ರೈಡರ್ಸ್, ತೋಟದ ಮಧ್ಯ ಇರುವ ಟ್ರಾಕ್ ನಲ್ಲಿ ಸಿಕ್ಕಿಹಾಕಿಕೊಂಡಿರೋ ಜಿಪ್ಸಿಗಳು, ಸೌಂಡ್ ಮಾಡುತ್ತಾ ಹೋಡ್ತಿರೋ ಜಿಪ್ಸಿಗಳು, ಜಿಪ್ಸಿ ರೈಡ್ ಕಣ್ತುಂಬಿಕೊಳ್ತಿರೋ ಸ್ಥಳೀಯರು. ಆಫ್ ರೋಡ್ ಗಳಲ್ಲಿ ಎಂಜಾಯ್ ಮಾಡುತ್ತಾ ಡ್ರೈವ್ ಮಾಡ್ತಿರೋ ರೈಡರ್ ಗಳು. ತಮಗೆ ತಾವೇ ಸರಿಸಾಟಿ ಎಂಬಂತೆ ಮೈ ಜುಮ್ಮೆನ್ನುವಂತೆ ಮುನ್ನುಗ್ಗುತ್ತಿರುವ ಜಿಪ್ಸಿಗಳು. ಹೌದು ಈ ದೃಶ್ಯ ಕಂಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವಗಲ್ ಗ್ರಾಮದಲ್ಲಿ. ಕೊಪ್ಪ ಮೋಟರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜಿಪ್ಸಿ ಹಾಗೂ ಜೀಪ್ ರೈಡರ್ಸ್ ಗೆ ಅಂತಾ ಈಕೋ ಡ್ರೈವ್ 4×4 ಅಂತಾ ಸಾಹಸಮಯ ರೈಡ್ ಏರ್ಪಡಿಸಲಾಗಿತ್ತು. ಈ ರೈಡ್ನಲ್ಲಿ ಸುಮಾರು 50 ಕ್ಕೂ ಹೆಚ್ಚು ಜಿಪ್ಸಿಗಳು ಹಾಗೂ 100ಕ್ಕೂ ಹೆಚ್ಚು ರೈಡರ್ ಗಳು, ಕೋ ರೈಡರ್ ಗಳು ಹಾಗೂ ರೈಡರ್ ಗಳ ಕುಟುಂಬಸ್ಥರು ಭಾಗಿಯಾಗಿದ್ರು. 16.3 ಕಿ.ಮೀ. ವ್ಯಾಪ್ತಿಯ ಆಪ್ ರೋಡ್ ಟ್ರ್ಯಾಕ್, ವಾಟರ್ ಸ್ಟ್ರೀಮಿಂಗ್ ಟ್ರ್ಯಾಕ್ ಹಾಗೂ ಮಡ್ ಟ್ರ್ಯಾಕ್ ಗಳ ರಸ್ತೆಯಲ್ಲಿ ಸೌಂಡ್ ಮಾಡುತ್ತಾ ಓಡಿಸ್ತಿದ್ದ ಜಿಪ್ಸಿ ಗಳ ನೋಡ್ದೋರ ಎದೆ ಮೇಲೆ ಹೋದಂತಿತ್ತು. ಮೈ ಜುಮ್ ಎನಿಸೋ ರೀತಿಯಲ್ಲಿ ಜಿಪ್ಸಿಗಳು ಸಾಗ್ತಿದ್ವು. ಇನ್ನು ಕೆಸರಿನಲ್ಲಿ ಜಿಪ್ಸಿ ಸಿಕ್ಕಿಹಾಕಿಕೊಂಡಾಗ ರೈಡರ್ ಗಳ ಮೇಲತ್ತಿಸೋಕೆ ಹರಸಾಹಸ ಪಡ್ತಿದ್ರು. ವಾಟರ್ ಸ್ಟ್ರೀಮಿಂಗ್ ಜಿಪ್ಸಿ ರೈಡ್ ನೋಡೋಕೆ ಥ್ರಿಲಿಂಗ್ ಆಗಿತ್ತು. ಜಿಪ್ಸಿ ಡ್ರೈವ್ ನೋಡ್ದೋರು ನಾವು ಒಮ್ಮೆ ಡ್ರೈವ್ ಮಾಡೋಕೆ ಅಂದುಕೊಂಡು ಸಖತ್ ಎಂಜಾಯ್ ಮಾಡ್ತಿದ್ರು. ಇನ್ನು ಈ ಸಾಹಸಮಯ ರೈಡ್ ಏರ್ಪಡಿಸಿ ನಾವು ಸಖತ್ ಎಂಜಾಯ್ ಮಾಡಿದ್ವಿ ಹಾಗೂ ಭಾಗವಹಿಸಿದವರಿಗೆ ಪರಿಸರದ ರಕ್ಷಣೆ ಬಗ್ಗೆ ಫಲಕಗಳನ್ನು ಹಾಕಿ ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡಿದ್ವಿ ಅಂತಾರೆ ಆಯೋಜಕರು.

ಕೊಪ್ಪ ಮೋಟರ್ ಸ್ಪೋಟ್ಸ್ ಕ್ಲಭ್ ಅಧ್ಯಕ್ಷ ಹಾಗೂ ಆಯೋಜಕರಾದ ಪೃಥ್ವಿರಾಜ್ ರವರು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿ ಇನ್ನು ಈ ರೈಡ್ನಲ್ಲಿ ಬೆಂಗಳೂರು, ಹಾಸನ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 100 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದು ಈ ಸಾಹಸಮಯ ರೈಡ್ನಲ್ಲಿ ಜಿಪ್ಸಿ ರೈಡ್ ಮಾಡಿದ್ರು. ಇನ್ನು ತೋಟದ ಮಧ್ಯೆ ಹಾವು ಬಳುಕಿನ ಮಡ್ ರಸ್ತೆಯಲ್ಲಿ ಜಿಪ್ಸಿಗಳು ರೈಡರ್ ಗಳು ರೈಡ್ ಮಾಡ್ತಿದ್ರೆ ಕೋ ರೈಡರ್ ಗಳು ಸಖತ್ ಎಂಜಾಯ್ ಮಾಡಿದ್ರು. ಈ ರೈಡ್ನಲ್ಲಿ ಮಾರುತಿ ಸುಜುಕಿ, ಮಹೇಂದ್ರ ಕಂಪನಿಯ ಕಾರುಗಳು ಅಸಾಧ್ಯವೆನಿಸುವ ರಸ್ತೆಗಳಲ್ಲಿ ಮಿಂಚಿನ ವೇಗದಲ್ಲಿ ಸಾಗಿ ಒಂದಕ್ಕೊಂದು ಸೆಡ್ಡು ಹೊಡೆದು ಮುನ್ನುಗುತ್ತಿದ್ದು ರೈಡರ್ ಗಳು ಸಖತ್ ಎಂಜಾಯ್ ಮಾಡಿದ್ರು.

ಕಾಫಿನಾಡಲ್ಲಿ ನಡೆದ ವಂಡರ್ ಪುಲ್ ಜಿಪ್ಸಿ ರೈಡ್ ಬಗ್ಗೆ ಮಾತನಾಡಿದ ಲೇಡಿ ರೈಡರ್ ಗಾನವಿರವರು ಒಟ್ನಲ್ಲಿ ಸದಾ ಹೈವೇ ಗುಂಗಲ್ಲಿ ಜಿಪ್ಸಿ ಓಡಿಸುತ್ತಿದ್ದ ರೈಡರ್ ಗಳಿಗೆ ಚಿಕ್ಕಮಗಳೂರಿನ ಕೊಪ್ಪದಲ್ಲಿ ವಾಟರ್ ಸ್ಟ್ರಿಮಿಂಗ್ ಹಾಗೂ ಆಫ್ ರೋಡ್ ಟ್ರ್ಯಾಕ್ ಗಳಲ್ಲಿ ಡ್ರೈವ್ ಮಾಡಿದ್ದು ಸಖತ್ ಮಜಾ ನೀಡ್ತು, ಮುಂದಿನ ದಿನಗಳಲ್ಲಿ ಸಂಸ್ಥೆಯ ಆಶಯದಂತೆ ಮತ್ತಷ್ಟು ಜಿಪ್ಸಿ ರೈಡರ್ ಗಳು ಇಂತಹ ಸಾಹಸಮಯ ರೈಡಿಂಗ್ ನಲ್ಲಿ ಭಾಗಿಯಾಗಲಿ ಎಂದು ಆಶಿಸಿದ್ದಾರೆ.









